ಸುಂಟಿಕೊಪ್ಪ: ಸಂತ ಸೆಬಾಸ್ಟೀನ್ ದೇವಾಲಯದ ವಾರ್ಷಿಕ ಮಹೋತ್ಸವವು ಜ.24 ರಿಂದ 26ರವರೆಗೆ ನಡೆಯಲಿದೆ ಎಂದು ದೇವಾಲಯದ ಧರ್ಮಗುರುಗಳಾದ ರೆ.ಫಾದರ್ ಸೆಬಾಸ್ಟೀನ್ ಪೂವತ್ತಿಗಲ್ ತಿಳಿಸಿದ್ದಾರೆ.
ಸಂತ ಸೆಬಾಸ್ಟೀನ್ ವಾರ್ಷಿಕೋತ್ಸವದ ಅಂಗವಾಗಿ 23ರವರೆಗೆ ಸಂಜೆ ದಿವ್ಯ ಬಲಿಪೂಜೆ, ನೊವೆನಾ ಪರಮಪ್ರಸಾದದ ಆರಾಧನೆ, ಅಂಬು ಕಾಣಿಕೆ, ಹರಕೆಯ ಮಧ್ಯಸ್ಥಿಕೆ ಪ್ರಾರ್ಥನೆ ಹಾಗೂ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ನೇರವೇರಿಲಿದೆ.
24 ರಂದು ಸಂಜೆ 4.30 ಗಂಟೆಗೆ ಧ್ವಜಾರೋಹಣವನ್ನು ದೇವಾಲಯದ ಧರ್ಮಗುರುಗಳಾದ ರೆ.ಫಾದರ್ ಸೆಬಾಸ್ಟೀನ್ ಪೂವತ್ತಿಗಲ್ ನೇರವೇರಿಸಲಿದ್ದು, 4.45ಕ್ಕೆ ಬಲಿಪೂಜೆ ಹಾಗೂ ಸಂಜೆ 6 ಗಂಟೆಗೆ ಸಮಾಧಿ ಸಂದರ್ಶನ, ಮೃತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು. 25 ರಂದು ಸಂಜೆ 5 ಗಂಟೆಗೆ ಹಬ್ಬದ ಪೂರ್ವಕ ದಿವ್ಯ ಬಲಿಪೂಜೆ, ಪರಮಪ್ರಸಾದದ ಆರಾಧನೆ ನೊವೇನಾ ಹಾಗೂ ಸಂಜೆ 6.15 ಕ್ಕೆ ವಾಹನಗಳ ಆಶೀರ್ವಾದವನ್ನು ಮೈಸೂರು ಕ್ರೈಸ್ಟ್ ಕಾಲೇಜಿನ ಪ್ರಾಂಶುಪಾಲ ವಂ.ಪಾ.ಜಿಂಟೋ ಇಂಜಿಕಾಲಾಯಿಲ್ ನೇರವೇರಿಸಲಿದ್ದಾರೆ. 26 ರಂದು ಸಂಜೆ 5 ಗಂಟೆಗೆ ಹಬ್ಬದ ವಿಧಾನ ಪೂರ್ವಕ ದಿವ್ಯ ಬಲಿಪೂಜೆಯನ್ನು ತಲಚೇರಿಯ ಮಹಾಧರ್ಮ ಪ್ರಾಂತ್ಯದ ವಂ.ಫಾ.ಜಿತಿನ್ ವಯಲಿಂಗಲ್ ನೇರವೇರಿಸದಲಿದ್ದಾರೆ. ಅಮದು ಸಂಜೆ 6.45ಕ್ಕೆ ದೀಪಾಲಂಕೃತ ತೇರಿನ ಮೆರವಣಿಗೆ, ರಾತ್ರಿ 8 ಗಂಟೆಗೆ ಸ್ನೇಹ ಭೋಜನ, ರಾತ್ರಿ 8.30ಕ್ಕೆ ಹರಕೆ ಹರಾಜು ನಡೆಯಲಿದೆ. ಭಕ್ತಾಧಿಗಳು ಸಂತ ಸೆಬಾಸ್ಟೀನ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಧರ್ಮಗುರುಗಳಾದ ರೆ.ಫಾದರ್ ಸೆಬಾಸ್ಟೀನ್ ಪೂವತ್ತಿಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.