ಜಿಲ್ಲೆ

24ರಂದು ಯೋಗಿ ಆದಿತ್ಯನಾಥ್ ರೋಡ್‌ಶೋ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚಿತ್ರದುರ್ಗದಲ್ಲಿ ಏ.24ರಂದು ರೋಡ್ ಶೋ ನಡೆಸುವ ಮೂಲಕ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರ ಪರ ಮತಯಾಚಿಸಲಿದ್ದಾರೆ ಎಂದು ಎಂಎಲ್‌ಸಿ ಎನ್.ರವಿಕುಮಾರ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಬಿಜೆಪಿ- ಜೆಡಿ ಎಸ್ ಕಾರ‌್ಯಕರ್ತರು,ಅಭಿಮಾನಿಗಳು ರೋಡ್‌ಶೋನಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 11ರಿಂದ 12.30ರವರೆಗೆ ರೋಡ್ ಶೋ ನಡೆಯಲಿದೆ ಎಂದರು.
ಏ.19ರಿಂದ ಮೂರು ದಿನಗಳ ಕಾಲ ಚಿತ್ರದುರ್ಗ ನಗರದ 35 ವಾರ್ಡ್‌ಗಳು ಹಾಗೂ ಕ್ಷೇತ್ರ ವ್ಯಾಪ್ತಿಯ 2167 ಬೂತ್‌ಗಳ ಮಟ್ಟ ದಲ್ಲಿ ಮನೆ, ಮನೆ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಚುನಾವಣೆಯಲ್ಲಿ 40 ಸೀಟುಗಳನ್ನು ಗೆಲ್ಲಲ್ಲು ಕಷ್ಟ ಪಡಬೇಕಿರುವ ಕಾಂಗ್ರೆಸ್ಸಿಗೆ ಪ್ರತಿಪಕ್ಷ ಸ್ಥಾನವೂ ಸಿಗದು,ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಅಲೆ ವ್ಯಾಪಕವಾಗಿದೆ ಎಂದರು.
ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ,ಏ.19ರಂದು ಕ್ಷೇತ್ರದ ವಿವಿಧೆಡೆ ಮಾಜಿ ಸಿಎಂ ಎಚ್.ಡಿ. ಕು ಮಾರಸ್ವಾಮಿ ಅವರು ಪ್ರಚಾರ ನಡೆಸಲಿದ್ದಾರೆ. ತುಮಕೂರು ಜಿಲ್ಲೆ ಪಾವಗಡ,ಶಿರಾ,ಹಿರಿಯೂರು ಹಾಗೂ ಪರಶುರಾಂಪುರದಲ್ಲಿ ಏರ್ಪ ಡಿಸಿರುವ ಸಮಾವೇಶಗಳಲ್ಲಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ,ಮದಕರಿ ನಾಯಕರ ಥೀಮ್‌ಪಾರ್ಕ್ ಹಾಗೂ ಕೋಟೆ ಅಭಿವೃದ್ಧಿಗೆ ಬಿಜೆಪಿ ಬ ದ್ಧವಿದೆ. ಕೇಂದ್ರ ಗೃಹ ಸಚಿವ ಅಮಿತ್ ಈ ನಿಟ್ಟಿನಲ್ಲಿ ಉತ್ಸುಕರಾಗಿದ್ದಾರೆ. ಕೋಟೆ ಅಭಿವೃದ್ಧಿಗೆ 30 ಕೋಟಿ ರೂ.ಅನುದಾನವನ್ನೂ ಕಾಯ್ದಿ ರಿಸಲಾಗಿದೆ. ಥೀಮ್‌ಪಾರ್ಕ್ ಹಾಗೂ ಮದಕರಿನಾಯಕರ ಉತ್ಸವ ಯೋಜನೆಗಳನ್ನು ಪಕ್ಷ ಅನುಷ್ಠಾನಗೊಳಿಸಲಿದೆ ಎಂದರು. ಅಭ್ಯರ್ಥಿ ಗೋವಿಂದ ಎಂ.ಕಾರಜೋಳ, ಬಿಜೆಪಿ,ಜೆಡಿಎಸ್ ಹಾಗೂ ಎನ್‌ಡಿಎ ಬೆಂಬಲಿಸಿರುವ ಪಕ್ಷೇತರ ನಗರಸಭೆ ಸದಸ್ಯರು ಇದ್ದರು.