ಜಿಲ್ಲೆ

24ರಂದು ಕಾರ್ಯಾಗಾರ

ಬಾಳೆಲೆ: ಸುಸ್ಥಿರ ಕಾಫಿ ಕೃಷಿಗೆ ಅನುಸರಿಸಬೇಕಾದ ಉತ್ತಮ ಕೃಷಿ ಪದ್ಧತಿಗಳ ಕುರಿತು ಕಾಫಿ ಮಂಡಳಿ, ಸುಕ್ಡೆನ್ ಕಾಫಿ ಸಹಯೋಗದೊಂದಿಗೆ ನಿಟ್ಟೂರು ಗ್ರಾಮ ಪಂಚಾಯಿತಿ ಮತ್ತು ಇಗ್ಗುತ್ತಪ್ಪ ಸಂಘದ ಸಹಕಾರದೊಂದಿಗೆ ಫೆ.24ರಂದು ಕಾರ್ಯಾಗಾರ ಏರ್ಪಡಿಸಲಾಗಿದೆ.

ಬೆಳಗ್ಗೆ 10 ಗಂಟೆಗೆ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಚೆಟ್ಟಳ್ಳಿ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿಯೂ ಆಗಿರುವ ಮಣ್ಣು ವಿಜ್ಞಾನಿ ಡಾ.ಎಸ್.ಎ.ನದಾಫ್, ಗೊಣಿಕೊಪ್ಪಲು ಕಾಫಿ ಮಂಡಳಿ ಕಿರಿಯ ಸಂಪರ್ಕ ಅಧಿಕಾರಿ ಡಿ.ಎಸ್.ಮುಖಾರೀಬ್ ಭಾಗವಹಿಸಲಿದ್ದಾರೆ. ಸ್ಥಳದಲ್ಲೇ ಮಣ್ಣು ಪರೀಕ್ಷೆ ಮಾಡಿ ಸುಣ್ಣದ ಶಿಫಾರಸನ್ನು ಒದಗಿಸಲಾಗುತ್ತದೆ. ಬಾಳೆಲೆ ಹೋಬಳಿ ವ್ಯಾಪ್ತಿಯ ಆಸಕ್ತ ಕಾಫಿ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ತೋಟದ ಮಣ್ಣು ಮಾದರಿಯನ್ನು ತಂದು ಕಾರ್ಯಕ್ರಮದ ಪ್ರಯೋಜನವನ್ನು ಪಡೆಯುವಂತೆ ಗೊಣಿಕೊಪ್ಪಲು ಕಾಫಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.