ಶ್ರುತಿಮಂಜರಿ ಪ್ರತಿಷ್ಠಾನ 24ನೇ ಶ್ರಾವಣ ಯುವ ಸಂಗೀತೋತ್ಸವವನ್ನು ಆ.18 ರಿಂದ 20 ರವರೆಗೆ ಸರಸ್ವತಿಪುರಂನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಆಯೋಜಿಸಿದೆ. 18 ರಂದು ಸಂಜೆ 6 ಗಂಟೆಗೆ ವಿದುಷಿ ಮಾಧುರಿ ಕೌಶಿಕ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನೀಡಲಿದ್ದಾರೆ.
ಇವರಿಗೆ ವಿದುಷಿ ಸಿ.ವಿ.ಶ್ರುತಿ(ಪಿಟೀಲು), ವಿದ್ವಾನ್ ಸಾಯಿ ಶಿವು ಲಕ್ಷ್ಮಿಕೇಶವ್ (ಮೃದಂಗ), ವಿದ್ವಾನ್ ಎಸ್.ಮಂಜುನಾಥ್(ಘಟಂ) ಸಾಥ್ ನೀಡಲಿದ್ದಾರೆ.
19 ರಂದು ಸಂಜೆ 6 ಗಂಟೆಗೆ ವಿದ್ವಾನ್ ಈಶ್ವರ್ ಅಯ್ಯರ್ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನೀಡಲಿದ್ದಾರೆ.
ಇವರಿಗೆ ವಿದುಷಿ ಪೃಥ್ವಿ ಭಾಸ್ಕರ್(ಪಿಟೀಲು), ವಿದ್ವಾನ್ ಪವನ್ ಮಾಧವ್ ಮಾಸೂರ್(ಮೃದಂಗ) ಸಹಕಾರ ನೀಡಲಿದ್ದಾರೆ. 20 ರಂದು ಸಂಜೆ 6 ಗಂಟೆಗೆ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದುಷಿ ವೈ.ಜಿ.ಶ್ರೀಲತಾ (ವೀಣೆ), ವಿದ್ವಾನ್ ನಿಕ್ಷಿತ್ ಪುತ್ತೂರ್ (ಮೃದಂಗ) ಹಾಗೂ ವಿದ್ವಾನ್ ಬಿ.ರಾಜಶೇಖರ್(ಮೋರ್ಚಂಗ್) ಕಾರ್ಯಕ್ರಮ ನೀಡಲಿದ್ದಾರೆ.