ಗುರುಪುರ: ಇಲ್ಲಿನ ಶ್ರೀ ಕೃಷ್ಣ ಮಿತ್ರ ಮಂಡಳಿ ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಸಹಯೋಗದಲ್ಲಿ ನ.24ರಂದು ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಲಿದೆ.
ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಶಿಬಿರ ನಡೆಯಲಿದೆ. ಜನ್ಮ ದಿನಾಂಕ ಬದಲಾವಣೆಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಜನನ ಪ್ರವಾಣ ಪತ್ರ, ಪಾಸ್‌ಪೋರ್ಟ್ ಅವಶ್ಯ. ಹೆಸರು ಬದಲಾವಣೆಗೆ ಭಾವಚಿತ್ರ, ಪಾನ್ ಕಾರ್ಡ್, ಅಂಕಪಟ್ಟಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಜನನ ಪ್ರವಾಣ ಪತ್ರ ಅವಶ್ಯ. ವಿಳಾಸ ಬದಲಾವಣೆಗೆ ಪಂಚಾಯಿತಿಯಿಂದ ವಿಳಾಸ ದೃಢೀಕರಣ ಪತ್ರ, ಪಡಿತರ ಚೀಟಿ, ತಹಸೀಲ್ದಾರ್ ಅಥವಾ ಗಜೆಟೆಡ್ ಅಧಿಕಾರಿಯ ಸರ್ಟಿಫಿಕೇಟ್ ಹಾಗೂ ಹೊಸ ಆಧಾರ್ ನೋಂದಣಿಗಾಗಿ, 10 ವರ್ಷ ಕೆಳಗಿನವರಿಗೆ ಜನನ ಪ್ರವಾಣ ಪತ್ರ, ವಾಸ್ತವ್ಯ ದೃಢೀಕರಣ ಪತ್ರ, ಮೊಬೈಲ್ ಸಂಖ್ಯೆ ಮತ್ತು ಮಕ್ಕಳ ಬಯೋಮೆಟ್ರಿಕ್ ಅಪ್‌ಡೇಟ್ ಅವಶ್ಯ.
ಅಂಚೆ ಇಲಾಖೆ ಸಮಗ್ರ ರಕ್ಷಣಾ ಯೋಜನೆಗಾಗಿ(ಅಪಘಾತ ವಿಮೆ) ಐಪಿಪಿಬಿ ಖಾತೆ ಕಡ್ಡಾಯ. ಇದಕ್ಕಾಗಿ 250 ರೂ. ಖಾತೆ ತೆರೆಯಬಹುದು. ಆಧಾರ್ ಮೊಬೈಲ್ ನಂಬರ್ ತಿದ್ದುಪಡಿಗಾಗಿ ಈಗಾಗಲೇ ಹೊಂದಿರುವ ಆಧಾರ್ ಕಾರ್ಡ್ ಮತ್ತು ಮೊಬೈಲ್ ೆನ್ ಅವಶ್ಯ. ಶಿಬಿರದಲ್ಲಿ ಇತರ ಸೇವೆಗಳು ಲಭ್ಯವಿವೆ ಎಂದು ಪ್ರಕಟಣೆ ತಿಳಿಸಿದೆ.