ಜಿಲ್ಲೆ

ಚುನಾವಣೆ ಕಣದಲ್ಲಿ 2439 ಕಲಿಗಳು

Gadag

ಗದಗ: ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಜಿಲ್ಲೆಯ 64 ಗ್ರಾಪಂಗಳ 850 ಸ್ಥಾನಗಳಿಗೆ 2439 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

895 ಸ್ಥಾನಗಳ ಪೈಕಿ 36 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರೆ, 9 ಸ್ಥಾನಗಳು ನಾಮಪತ್ರ ಸಲ್ಲಿಸದ ಕಾರಣ ಖಾಲಿ ಉಳಿದಿವೆ.

ಮುಂಡರಗಿ: ತಾಲೂಕಿನ 18 ಗ್ರಾಪಂಗಳ 253 ಸ್ಥಾನಗಳಿಗೆ ಅನುಸೂಚಿತ ಜಾತಿ 154, ಅನುಸೂಚಿತ ಪಂಗಡ 62, ಹಿಂದುಳಿದ ಅ ವರ್ಗ 110, ಹಿಂದುಳಿದ ಬ ವರ್ಗ 21, ಸಾಮಾನ್ಯ 355 ಸೇರಿ 702 ಅಭ್ಯರ್ಥಿಗಳು.

ನರಗುಂದ: ತಾಲೂಕಿನ 13 ಗ್ರಾಪಂಗಳ 160 ಸ್ಥಾನಗಳಿಗೆ ಅನುಸೂಚಿತ ಜಾತಿ 43, ಅನುಸೂಚಿತ ಪಂಗಡ 30, ಹಿಂದುಳಿದ ಅ ವರ್ಗ 77, ಹಿಂದುಳಿದ ಬ ವರ್ಗ 22, ಸಾಮಾನ್ಯ 206 ಸೇರಿ 378 ಅಭ್ಯರ್ಥಿಗಳು.

ರೋಣ: ತಾಲೂಕಿನ 24 ಗ್ರಾಪಂಗಳ 312 ಸ್ಥಾನಗಳಿಗೆ ಅನುಸೂಚಿತ ಜಾತಿ 132, ಅನುಸೂಚಿತ ಪಂಗಡ 62, ಹಿಂದುಳಿದ ಅ ವರ್ಗ 184, ಹಿಂದುಳಿದ ಬ ವರ್ಗ 58, ಸಾಮಾನ್ಯ 534 ಸೇರಿ 970 ಅಭ್ಯರ್ಥಿಗಳು.

ಗಜೇಂದ್ರಗಡ: ತಾಲೂಕಿನ 9 ಗ್ರಾಪಂಗಳ 125 ಸ್ಥಾನಗಳಿಗೆ ಅನುಸೂಚಿತ ಜಾತಿ 88, ಅನುಸೂಚಿತ ಪಂಗಡ 27, ಹಿಂದುಳಿದ ಅ ವರ್ಗ 52, ಹಿಂದುಳಿದ ಬ ವರ್ಗ 18, ಸಾಮಾನ್ಯ 204 ಸೇರಿ 389 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

117 ಗ್ರಾಪಂ, 1795 ಸ್ಥಾನಗಳು: ಜಿಲ್ಲೆಯಲ್ಲಿ ಮೊದಲ ಹಂತದ 53 ಗ್ರಾಪಂಗಳ 743 ಸ್ಥಾನಗಳಿಗೆ 2216 ಅಭ್ಯರ್ಥಿಗಳು, ಎರಡನೇ ಹಂತದ 64 ಗ್ರಾಪಂಗಳ 850 ಸ್ಥಾನಗಳಿಗೆ 2439 ಅಭ್ಯರ್ಥಿಗಳು ಸೇರಿ 117 ಗ್ರಾಪಂಗಳ 1795 ಸ್ಥಾನಗಳಿಗೆ 4655 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ. ಒಟ್ಟು 87 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.