ಜಿಲ್ಲೆ

ಯುವಜನರು ಅವಕಾಶ ಸದ್ಬಳಕೆ ಮಾಡಿಕೊಳ್ಳಲಿ

ಪ್ರಶಾಂತ ಹೂಗಾರ

ಅಥಣಿ: ಗ್ರಾಮಿಣ ಭಾಗದ ಯುವಜನರು ಉದ್ಯೋಗಾವಕಾಶ ಒದಗಿಸುತ್ತಿರುವ ಮುರುಘೇಂದ್ರ ವಿಶ್ವಸ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಹೊನವಾಡದ ಬಾಬುರಾವ್ ಮಹಾರಾಜರು ಹೇಳಿದರು.

ಪಟ್ಟಣದಲ್ಲಿ ಎಂಜಿಸಿಜಿ ಮಹಿಳಾ ಮಹಾವಿದ್ಯಾಲಯ ಹಾಗೂ ಕರಾವಳಿ ಟೀಚರ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ನೀಡಲು ನೂರಾರು ಕಂಪನಿಗಳು ಮುಂದೆ ಬಂದಿವೆ. ಯುವಕರು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಶ್ವಸ್ಥ ವಿದ್ಯಾಪೀಠದ ಅಧ್ಯಕ್ಷ ಮಲ್ಲಿಕಾರ್ಜುನ ಗಂಗಾಧರ ಮಾತನಾಡಿ, ದೇಶದ ಹೆಮ್ಮೆಯ ಉದ್ಯಮಿ ದಿ.ರತನ್ ಟಾಟಾ ಅವರು ಉಪ್ಪಿನಿಂದ ಆರಂಭಿಸಿದ ವೃತ್ತಿ ಬದುಕು ಉಕ್ಕಿನ ಸಾಮ್ರಾಜ್ಯ ನಿರ್ಮಾಣದವರೆಗೆ ಸಾಗಿತು. ಕೀಳರಿಮೆ ಮನೋಭಾವನೆ ತೊರೆದು ಮುನ್ನುಗ್ಗಿದಾಗ ಯಶಸ್ಸು ನಿಶ್ಚಿತ ಎಂದರು. ವಿವಿಧ ಕಂಪನಿಗಳು, ಖಾಸಗಿ ಬ್ಯಾಂಕ್‌ಗಳಿಗೆ ಪಿಯುಸಿ, ಐಟಿಐ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರೈಸಿದ ಅಭ್ಯರ್ಥಿಗಳು ಸಂದರ್ಶನ ನೀಡಿದರು.

ಮುಖಂಡ ಸಂಗಮೇಶ ಅಲಿಬಾದಿ, ಮಲ್ಲಿಕಾರ್ಜುನ ವಾಲಿ, ವಿಜಯ ಕುಲಕರ್ಣಿ, ಪಾಂಡುರಂಗ ಆಜೂರ, ಈಶ್ವರ ಸವದಿ, ಅಶೋಕ ಮಂಟೂರ, ಎಸ್.ಎಸ್.ಹೂಗಾರ, ಅಶೋಕ ಪಾಟೀಲ, ವಿಜಯ ಗಂಗಾಧರ ಇತರರಿದ್ದರು.