ಚಿತ್ರದುರ್ಗ: ರೆಮ್ಸ್ ತಂತ್ರಾಂಶದಲ್ಲಿ ಹಾಫ್ ರಿಜೆಕಷನ್ ಪರ್ಮಿಟ್ ಕ್ಯಾನ್ಸಲೇಷನ್ ಕೋರಿ ಧವಸಧಾನ್ಯ ಖರೀದಿದಾರ ಒಕ್ಕೂಟ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮನವಿ ಮಾಡಿದೆ. ಈ ಮನವಿ ಪುರಸ್ಕರಿಸದಿದ್ದರೆ ಇದೇ ಜ.24ರಿಂದ ಮೆಕ್ಕಜೋಳ ಟೆಂಡರ್‌ನಲ್ಲಿ ಭಾಗವಹಿಸುವುದಿಲ್ಲವೆಂದು ತಿಳಿಸಿದೆ. ಆದರೆ, ತಂತ್ರಾಂಶದಲ್ಲಿ ಇದಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ 24 ರಿಂದ ಅನಿರ್ದಿಷ್ಟಾವಧಿವರೆಗೆ ಮೆಕ್ಕಜೋಳ ಮಾರುಕಟ್ಟೆ ಇರುವುದಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಕೃಷ್ಣಪ್ಪ ತಿಳಿಸಿದ್ದಾರೆ.