ಮೈಸೂರು: ಉದಯಗಿರಿ ಗಲಭೆ ಕಾನೂನು ಸುವ್ಯವಸ್ಥೆಗೆ ಆತಂಕಕಾರಿ ಬೆಳವಣಿಗೆಯಾಗಿದ್ದು, ಸುರಕ್ಷತೆ, ಅಖಂಡತೆ, ಏಕತೆಗೆ ಸವಾಲಾಗಿರುವ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ‘ಮೈಸೂರು ಚಲೋ’ ಜನಾಂದೋಲನ ಜಾಗೃತಿ ಸಭೆಯನ್ನು ಫೆ.24ರಂದು ಆಯೋಜಿಸಲಾಗಿದೆ
.ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯಿಂದ ಸಭೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11ಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಮೈಸೂರಿಗೆ ಆಗಮಿಸಲಿದ್ದಾರೆ. ನಗರದ ಗನ್‌ಹೌಸ್ ಬಳಿಯಿಂದ ರ‌್ಯಾಲಿ ನಡೆಸಿ, ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಸಮಾವೇಶಗೊಳ್ಳಲಿದ್ದಾರೆ.
ಬಳಿಕ ಬೃಹತ್ ಜನಾಂದೋಲನ ಜಾಗೃತಿ ಸಭೆ ನಡೆಯಲಿದೆ ಎಂದು ಸಮಿತಿ ಸಂಚಾಲಕ ಮಹೇಶ್ ಕಡಗದಾಳ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಉದಯಗಿರಿ ಗಲಭೆ ಪ್ರಕರಣದ ಬಂಧಿತ ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಕೇಸು ದಾಖಲಿಸಿಸಬೇಕು.
ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು. ಸಮಿತಿ ಸಹ ಸಂಚಾಲಕರಾದ ಪ್ರಜ್ವಲ್, ಬಸವರಾಜು, ಚೇತನ್ ಇದ್ದರು.