ಜಿಲ್ಲೆ

24 ಗಂಟೆಯಲ್ಲಿ 227 ಶಂಕಿತರು ಪತ್ತೆ

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 227 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಲಾಗಿರುವವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಮಂಗಳವಾರ ಇದ್ದ 2757ಶಂಕಿತರ ಸಂಖ್ಯೆ ಬುಧವಾರ 2993 ಕ್ಕೆ ಏರಿಕೆಯಾಗಿದೆ.

ಈವರೆಗೆ ಜಿಲ್ಲೆಯಲ್ಲಿ 2460 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 2013 ಜನರ ವರದಿ ನೆಗೆಟಿವ್ ಬಂದಿವೆ. 9 ಪ್ರಕರಣದಲ್ಲಿ ಪಾಸಿಟಿವ್ ಬಂದಿದ್ದು, 7 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 440 ವರದಿಗಳು ಬರಬೇಕಿದೆ. ಬುಧವಾರ ಬಾಕಿ ಇದ್ದ 317 ವರದಿಗಳ ಪೈಕಿ 104 ವರದಿಗಳು ನೆಗೆಟಿವ್ ಬಂದಿವೆ.

ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 2993 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 2212 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡಗಳಲ್ಲಿ 8 ಜನ ದಾಖಲಾಗಿದ್ದಾರೆ. 70 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 703 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ.

ಕಿಮ್ಸ್​ಗೆ ದಾನಿಗಳ ಕೊಡುಗೆ: ಹುಬ್ಬಳ್ಳಿಯಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್್ಸ)ಗೆ ಮಾಸ್ಕ್, ಪಿಪಿಇ ಕಿಟ್ ಸೇರಿ ಇತರೆ ವೈದ್ಯಕೀಯ ಪರಿಕರಗಳನ್ನು ದಾನವಾಗಿ ನೀಡಿದ್ದಾರೆ.

ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್​ವೆುಂಟ್(ಪಿಪಿಇ) 1600, ಎನ್-95 3ಸಾವಿರ, ಟ್ರಿಪಲ್ ಲೇಯರ್ ಮಾಸ್ಕ್ 300, ಹ್ಯಾಂಡ್ ಸ್ಯಾನಿಟೈಸರ್ 15 ಬಂದಿವೆ. ಸದ್ಯ ಪಿಪಿಇ 4ಸಾವಿರ, ಎನ್-95 ಮಾಸ್ಕ್ 2813, ಟ್ರಿಪಲ್ ಲೇಯರ್ ಮಾಸ್ಕ್ 41410, ಸ್ಯಾನಿಟೈಸರ್ 175 ಇವೆ. ಕೆಲವರು ಫೇಸ್ಟ್ ಸೀಲ್ಟ್, ವೀಡಿಯೋ ಲ್ಯಾರಿಂಗೋ ಸ್ಕೋಪ್ ವಿತರಿಸಿದ್ದಾರೆ. ಆದರೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಇನ್ನಷ್ಟು ಪಿಪಿಇ ಕಿಟ್, ವಿವಿಧ ಮಾಸ್ಕ್, ಔಷಧ ಕೊಡುವಂತೆ ಕೋರಲಾಗಿದೆ. ಇನ್​ಫೋಸಿಸ್ ಫೌಂಡೇಷನ್, ರೇಡಿಯಾಲಜಿ ಅಸೋಸಿಯೇಷನ್, ರೋಟರಿ ಕ್ಲಬ್, ಧಾರವಾಡದ ಐಐಟಿ ಸೇರಿ ಇತರೆ ಸಂಸ್ಥೆಗಳು ದಾನ ಮಾಡಿದ್ದು, ಅಂಬಾಜಿ ಟ್ರಸ್ಟ್ ಹಾಗೂ ಇಸ್ಕಾನ್ ವತಿಯಿಂದ ತಲಾ 250 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

ಕಿಮ್್ಸ ಮಾಸ್ಕ್ ಹೊರಗಡೆ ಮಾರಾಟ?: ಇಲ್ಲಿನ ಕಿಮ್ಸ್​ನ ಸಿಬ್ಬಂದಿಗೆ ವಿತರಿಸಿದ ಎನ್-95 ಹಾಗೂ ಟ್ರಿಪಲ್ ಲೇಯರ್ ಮಾಸ್ಕ್​ಗಳು ಹೊರಗಡೆ ಮಾರಾಟವಾಗುತ್ತಿವೆಯೇ? ಹೀಗೊಂದು ಅನುಮಾನವನ್ನು ಸ್ವತಃ ಆಡಳಿತ ಮಂಡಳಿಯೇ ವ್ಯಕ್ತ ಪಡಿಸುತ್ತಿದೆ. ಯಾವುದೇ ವ್ಯಕ್ತಿ ಬಿಳಿ ಬಣ್ಣದ ಎನ್-95 ಮಾಸ್ಕ್ ಧರಿಸಿ ಕಿಮ್ಸ್​ಗೆ ಹೋದರೆ, ಅನುಮಾನದಿಂದ ನೋಡುವ ಪರಿಪಾಠ ಶುರುವಾಗಿದೆ. ಹಾಗಾಗಿ ಕಿಮ್್ಸ ಸಿಬ್ಬಂದಿ ಯಾರಿಗಾದರೂ ಕೊಡುತ್ತಿದ್ದಾರೆಯೇ? ಅಥವಾ ಮಾರಾಟ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಎದ್ದಿವೆ. ಈ ಕುರಿತು ಆಡಳಿತ ಮಂಡಳಿಯೇ ಖುದ್ದು ಪರಿಶೀಲಿಸಿ ಸ್ಪಷ್ಟಪಡಿಸಬೇಕಿದೆ. ಇಲ್ಲವಾದರೆ ಇವರೇ ಮಾಸ್ಕ್​ಗಳನ್ನು ಹೊರಗಡೆ ಮಾರಾಟ ಮಾಡಲು ಅನುವು ಮಾಡಿಕೊಟ್ಟಂತಾಗಲಿದೆ ಎಂಬ ಆರೋಪ ಸಾರ್ವಜನಿಕರದು.