ಜಮಖಂಡಿ: ನಗರದ ಎಪಿಎಂಸಿ, ಕಾಯಿಪಲ್ಲೆ ಮಾರುಕಟ್ಟೆ ಸೇರಿ ವಿವಿಧ ಸ್ಥಳಗಳಲ್ಲಿ ಕಳೆದುಕೊಂಡ ದೂರುದಾರ ಸಾರ್ವಜನಿಕರ ಮೊಬೈಲ್‌ಗಳನ್ನು ಸಿಇಐಆರ್ ಆ್ಯಪ್ ಮೂಲಕ ನಗರ ಠಾಣೆ ಪೊಲೀಸ್ ಸಿಬ್ಬಂದಿ ಪತ್ತೆ ಹಚ್ಚಿ ಮೊಬೈಲ್ ಮಾಲೀಕರಿಗೆ ಮರಳಿಸಿದ್ದಾರೆ.
ನಗರಠಾಣೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಶಾಂತವೀರ ಈ. ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳ ಹಾಗೂ ಸಿಪಿಐ ಮಲ್ಲಪ್ಪ ಮಡ್ಡಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಅನೀಲ ಕುಂಬಾರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸಿಇಐಆರ್ ಆ್ಯಪ್ ಬಳಸಿ ತಾಲೂಕು, ಜಿಲ್ಲಾ ಕೇಂದ್ರ ಹಾಗೂ ಹೊರ ರಾಜ್ಯಗಳಲ್ಲಿದ್ದ 24 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ದೂರುದಾರರಿಗೆ ನೀಡಿರುವ ಕಾರ್ಯ ಶ್ಲಾಘನೀಯ ಎಂದರು.
ದೇಶದಲ್ಲಿ 22 ಲಕ್ಷ ಮೊಬೈಲ್‌ಗಳು ಕಳೆದಿರುವ ಕುರಿತು ದೂರು ದಾಖಲಾಗಿವೆ. ಅದರಲ್ಲಿ 11 ಲಕ್ಷ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 1.3 ಲಕ್ಷ ಸಿ.ಇ.ಐ.ಆರ್ ಆ್ಯಪ್ ಮೂಲಕ ರಿಕವರಿ ಮಾಡಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿಗೆ ನಗದು ಬಹುಮಾನ ನೀಡಲಾಯಿತು.
ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅನೀಲ ಕುಂಬಾರ, ಪೊಲೀಸ್ ಸಿಬ್ಬಂದಿ ಪ್ರಕಾಶ ಕಾಖಂಡಕಿ, ಶಂಕರ ಆಸಂಗಿ, ಶೇಖರ ನಾಯಕ, ಮುಸ್ತಾಕ ಬೂದಿಹಾಳ, ಪರಶುರಾಮ ಘಾಟಗೆ, ಪ್ರಕಾಶ ಹೊಸಮನಿ ಇತರರಿದ್ದರು.