ಚಿತ್ರದುರ್ಗ: ನಗರದ 23 ಪಾರ್ಕ್‌ಗಳ ಅಭಿವೃದ್ಧಿಗೆ 10 ಕೋಟಿ ರೂ.ಕೊಟ್ಟಿರುವುದಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಭಾನುವಾರ ಸಂಜೆ ದವಳಗಿರಿ ಬಡಾವಣೆಯ 2ನೇ ಹಂತದ ನವೀಕೃತ ಉದ್ಯಾನ ಉದ್ಘಾಟಿಸಿ ಮಾತನಾಡಿದ ಅವರು 20 ಲಕ್ಷ ರೂ.ವೆಚ್ಚದೊಂದಿಗೆ ಉದ್ಯಾನ ವನ್ನು ನವೀಕರಣಗೊಳಿಸಿ 17 ಎಲ್.ಇ.ಡಿ. ಬಲ್ಬ್‌ಗಳನ್ನು ಅಳವಡಿಸಲಾಗಿದೆ.
ನಿವಾಸಿಗಳು ಈ ಪಾರ್ಕ್‌ನ್ನು ಸ್ವಚ್ಛವಾಗಿಟ್ಟುರುವುದು ಶ್ಲಾಘ ನೀಯ. ನಗರದಲ್ಲಿರುವ ಎಲ್ಲ ಪಾರ್ಕ್‌ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಉದ್ಯಾನ ಪಕ್ಕದ ನಗರಾಭಿವೃದ್ಧಿ ಪ್ರಾಧಿಕಾರದ ಖಾಲಿ ಜಾಗದಲ್ಲಿ ವಾಣಿಜ್ಯಮಳಿಗೆಗಳನ್ನು ನಿರ್ಮಿಸಲಾಗುವುದು ಎಂದ ಅವರು,500 ಕೋಟಿ ರೂ.ಅನುದಾನದಲ್ಲಿ ನಗರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ನಗರೋತ್ಥಾನದದಡಿ 40 ಕೋಟಿ ರೂ.ಮಂಜೂರಾಗಿದೆ.ಆಶ್ರಯ ಲೇಔಟ್‌ಗೆ ಒಂದುವರೆ ಕೋಟಿ ರೂ.ಕೊಟ್ಟಿದೆ. 240 ಕೋಟಿ ರೂ.ವೆಚ್ಚದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸಲು ಟೆಂಡರ್ ಕರೆಯಲಾಗಿದೆ ಎಂದರು.
ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್‌ಸಿದ್ದಾಪುರ,ಆಯುಕ್ತ ಸೋಮಶೇಖರ್,ಸದಸ್ಯರಾದ ರೇಖಾ,ಉಷಾಬಾಯಿ,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ,ಸಂಪತ್,ಮಾಧುರಿ ಗಿರೀಶ್,ನಗರಸಭೆ ಸದಸ್ಯರಾದ ಬಾಲಮ್ಮ,ಮಲ್ಲಿಕಾರ್ಜುನ್,ವಕೀಲರಾದ ಎಂ.ಸಿ.ತಿಪ್ಪೇಸ್ವಾಮಿ, ಅನಿಲ್‌ಕುಮಾರ್,ನಾಗರಾಜ್, ಸಿ.ಜಿ.ಶ್ರೀನಿವಾಸ್, ಜೆ.ಎಸ್.ಗುರುಮೂರ್ತಿ,ಎಲ್.ಷಣ್ಮುಖ,ಬಿ.ಸಿ.ಕುಮಾರ್,ಅಶ್ರಫ್,ಜಯಣ್ಣ, ಈಶ್ವರಪ್ಪ,ರಾಜಣ್ಣ,ರಂಗಪ್ಪ,ಡಾ.ಚನ್ನಕೇಶವ,ಒ.ಬಿ.ಬಸವರಾಜ್,ತಾಪಂ ಮಾಜಿ ಸದಸ್ಯ ಸುರೇಶ್‌ನಾಯ್ಕ ಇತರರು ಇದ್ದರು.