ಜಿಲ್ಲೆ

23ರಂದು ಚಿತ್ರದುರ್ಗ ಬಂದ್,ಭಿತ್ತಿಪತ್ರ ಬಿಡುಗಡೆ

ಚಿತ್ರದುರ್ಗ:ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಆಗ್ರಹಿಸಿ ಜ.23ರಂದು ಕರೆ ನೀಡಿರುವ ಚಿತ್ರದುರ್ಗ ಬಂದ್ ಬಳಿಕ ಜಿಲ್ಲೆಯ ಪ್ರತಿ ತಾಲೂಕಲ್ಲೂ ಹೋರಾಟ ತೀವ್ರಗೊಳಿಸುವುದಾಗಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬಂದ್‌ನ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯಸರ್ಕಾರಗಳ ನಿ ರ್ಲಕ್ಷೃದಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ. ರಾಜ್ಯದ ಯಾವುದೇ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು ಇಷ್ಟೊಂದು ದೀರ್ಘ ಸ ಮಯ ತೆಗೆದುಕೊಂಡಿಲ್ಲ. ಈಗಾಗಲೇ ಯೋಜನಾ ವೆಚ್ಚ 22 ಸಾವಿರ ಕೋಟಿ ರೂ.ತಲುಪಿದ್ದು,ನಿರ್ಲಕ್ಷೃ ಧೋರಣೆ ಮುಂದುವರಿದರೆ ವೆಚ್ಚ ಇ ನ್ನಷ್ಟು ಹೆಚ್ಚಾಗಲಿದೆ.
ಅಜ್ಜಂಪುರ ಅಬ್ಬಿನಹೊಳಲು ಬಳಿ ಒಂದೂವರೆ ಕಿ.ಮೀ.ಭೂ ಸ್ವಾಧೀನ ಪ್ರಕ್ರಿಯೆ ತೊಡಕಾಗಿರುವುದು,ವಿಳಂಬಕ್ಕೆ ಕಾರಣವಾಗಿದೆ. ಕಳೆದ 8 ವ ರ್ಷಗಳಿಂದ ಈ ಭಾಗದ ಭೂ ಸ್ವಾಧೀನ ಸಮಸ್ಯೆ ಬಗೆಹರಿಸಲು,ಅಲ್ಲಿಯ ಕೆಲವು ರೈತರ ಮನವೊಲಿಸಲು ಸಾಧ್ಯವಾಗದೇ ಇರುವುದು ನಾಚಿಕೆ ಗೇಡಿನ ಸಂಗತಿ. ಒಬ್ಬ ಶಾಸಕನ ಎದುರು ಇಡೀ ಸರ್ಕಾರವೇ ಮಂಡಿಯೂರಿರುವುದು ಪ್ರಜಾಪ್ರಭುತ್ವದ ದುರಂತವೆಂದು ಆಕ್ರೋಶ ವ್ಯಕ್ತಪಡಿಸಿ ದರು.
ಎತ್ತಿನಹೊಳೆ ನೀರಾವರಿ ಯೋಜನೆಗೆ ದುಡ್ಡು ಸುರಿಯುತ್ತಿರುವ ರಾಜ್ಯಸರ್ಕಾರ ಭದ್ರಾಮೇಲ್ದಂಡೆ ಯೋಜನೆಗೆ ಉದಾಸೀನತೆ ತೋರಿದೆ. ಜಿಲ್ಲೆ ಯ ಜನಪ್ರತಿನಿಧಿಗಳೂ ನಿರ್ಲಕ್ಷೃವಹಿಸಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರು ಅಬ್ಬಿನಹೊಳಲು ಸಮಸ್ಯೆ ನಿವಾರಣೆಗೆ ಸಹಕಾರ ಸಿಗುತ್ತಿಲ್ಲ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭರವಸೆಯಂತೆ ಈವರೆಗೂ 5300 ಕೋಟಿ ರೂ.ಅನುದಾನ ಬಿಡುಗಡೆ ಆಗಿಲ್ಲ ಎಂದರು.
ಸ್ವರಾಜ್ ಇಂಡಿಯಾದ ಜಿಲ್ಲಾಧ್ಯಕ್ಷ ಪ್ರೊ.ಜೆ.ಯಾದವರೆಡ್ಡಿ ಮಾತನಾಡಿ,ರಾಜ್ಯಸರ್ಕಾರದ ಬಜೆಟ್‌ನಲ್ಲಿ ಜಲಸಂಪನ್ಮೂಲ ಇಲಾಖೆಗೆ ಮೀಸಲಿಡು ವ ಅನುದಾನದಲ್ಲಿ ಸಿಂಹಪಾಲು ಭದ್ರಾ ಮೇಲ್ದಂಡೆಗೆ ಮೀಸಲಿಡುವಂತೆ ಆಗ್ರಹಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂ ದ್,ವಿವಿಧ ಸಂಘಟನೆಗಳ ಪ್ರಮುಖರಾದ ಹಂಪಯ್ಯನಮಾಳಿಗೆ ಧನಂಜಯ,ಟಿ.ಷಫಿವುಲ್ಲಾ,ಲಕ್ಷ್ಮೀಕಾಂತ್,ವೈ.ಕುಮಾರ್,ಸತ್ಯಕೀರ್ತಿ,ವೀಣಾ ಗೌರಣ್ಣ,ಅವಿನಾಶ್ ಮತ್ತಿತರರು ಇದ್ದರು.
(ಸಿಟಿಡಿ 20 ಲಿಂಗಾರೆಡ್ಡಿ ಪ್ರೆಸ್‌ಮೀಟ್)
ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಕರೆ ನೀಡಿರುವ ಚಿತ್ರದುರ್ಗ ಬಂದ್ ಭಿತ್ತಿ ಪತ್ರವನ್ನು ಜಿಲ್ಲಾ ನೀರಾ ವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಬಿಡುಗಡೆ ಮಾಡಿದರು. ಪ್ರೊ.ಜೆ.ಯಾದವರೆಡ್ಡಿ, ಕೆ.ಆರ್.ದಯಾನಂದ್, ಹಂ ಪಯ್ಯನಮಾಳಿಗೆ ಧನಂಜಯ,ಟಿ.ಷಫಿವುಲ್ಲಾ,ಲಕ್ಷ್ಮೀಕಾಂತ್,ವೈ.ಕುಮಾರ್,ಸತ್ಯಕೀರ್ತಿ,ವೀಣಾಗೌರಣ್ಣ,ಅವಿನಾಶ್ ಇತರರು ಇದ್ದರು.