ಜಿಲ್ಲೆ

23ರಂದು ಗ್ರಾಪಂ ಉಪ ಚುನಾವಣೆ

ಚಿತ್ರದುರ್ಗ: ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾ ವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಜು.6ರಿಂದ 26ರವರೆಗೆ ಚುನಾವಣೆ ನಡೆಯುವ ಗ್ರಾಪಂಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. 6ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ.


12ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆ ದಿನವಾಗಿದೆ. 13ರಂದು ನಾಮಪತ್ರಗಳ ಪರಿಶೀಲನೆ ಹಾಗೂ 15ರಂದು ಉಮೇದು ವಾರಿಕೆ ಹಿಂಪಡೆಯಲು ಕೊನೆ ದಿನವಾಗಿದೆ. ಅಗತ್ಯವಿದ್ದರೆ 23ರಂದು ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ ಹಾಗೂ ಅವಶ್ಯಕತೆ ಇದ್ದರೆ 25ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. 26ರಂದು ಬೆಳಗ್ಗೆ 8ರಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು,ಅಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಗ್ರಾಪಂ ಹಾಗೂ ಸದಸ್ಯ ಸ್ಥಾನಗಳ ವಿವರ
ಮೊಳಕಾಲ್ಮೂರು ತಾಲೂಕು ಜಹಗೀರ್‌ಬುಡ್ಡೇನಹಳ್ಳಿ ಗ್ರಾಪಂ ವ್ಯಾಪ್ತಿ ಓಬಳಾಪುರ ಕ್ಷೇತ್ರದ 1 ಸ್ಥಾನ(ಸಾಮಾನ್ಯ).ಚಳ್ಳಕೆರೆ-ಮಲ್ಲೂರ ಹಳ್ಳಿ ಗ್ರಾಪಂ ವ್ಯಾಪ್ತಿ ಮಲ್ಲೂರಹಳ್ಳಿ-3 ಕ್ಷೇತ್ರದ 1 ಸದಸ್ಯ ಸ್ಥಾನ(ಅನುಸೂಚಿತ ಪಂಗಡ). ಚಿತ್ರದುರ್ಗ-ಕೂನಬೇವು ಗ್ರಾಪಂ ವ್ಯಾಪ್ತಿ ಹು ಣಸೇಕಟ್ಟೆ-2 ಕ್ಷೇತ್ರದ 1ಸದಸ್ಯ ಸ್ಥಾನ(ಅನುಸೂಚಿತ ಪಂಗಡ)ಕ್ಕೆ ಉಪ ಚುನಾವಣೆ ನಡೆಯಲಿದೆ ಎಂದು ಡಿಸಿ ಜಿ.ಆರ್.ಜೆ.ದಿವ್ಯಾಪ್ರಭು ತಿಳಿಸಿದ್ದಾರೆ.