ಶನಿವಾರಸಂತೆ: ಆಲೂರು ಸಿದ್ದಾಪುರ ಸಮೀಪದ ಸಂಗಯನಪುರ ಗ್ರಾಮದಲ್ಲಿ ಫೆ.23 ರಂದು 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನ ನಡೆಯುವ ಹಿನ್ನೆಲೆಯಲ್ಲಿ ಸಿದ್ಧತೆ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಆಲೂರುಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ವತಿಯಿಂದ ಸಮ್ಮೇಳನ ಉಪ ಸಮಿತಿ ಪದಾಧಿಕಾರಿಗಳ ಪೂರ್ವಸಭೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅರೆಭಾಷೆ ಹಿರಿಯ ಸಾಹಿತಿ ಅಮ್ಮಜಿರ ಪೊನ್ನಪ್ಪ ಮಾತನಾಡಿ, ಅರೆಭಾಷೆಯ ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಮ್ಮೇಳನವನ್ನು ನಡೆಸಲಾಗುತ್ತದೆ. ಅರೆಭಾಷೆಯನ್ನು ಅಭಿವೃದ್ಧಿ ಪಡಿಸುವುದರ ಜತೆಯಲ್ಲಿ ಸಂಸ್ಕೃತಿಯನ್ನು ಉತ್ತೇಜನ ನೀಡುವುದು ಸಮುದಾಯ ಬಾಂಧವರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಫೆ.23 ರಂದು ನಡೆಯುವ ಸಮ್ಮೇಳನವನ್ನು ಯಶಸ್ವಿಗೊಳಿಸಲು ಉಪ ಸಮಿತಿ ಪದಾಧಿಕಾರಿಗಳು, ಅರೆಭಾಷೆ ಬಾಂಧವರು ಹೆಚ್ಚಿನ ಶ್ರಮವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಮಾತನಾಡಿ, ರಾಜ್ಯದಲ್ಲಿ ಅರೆಭಾಷೆ, ತುಳು ಮುಂತಾದ ಉಪ ಭಾಷೆಗಳಿದ್ದು, ಪ್ರತಿಯೊಂದು ಭಾಷೆಯನ್ನು ಇತರ ಉಪ ಭಾಷಿಗರಿಗೆ ಕಲಿಸಿಕೊಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅರೆಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ರಾಜ್ಯದ ಕನ್ನಡದ ಉಪ ಭಾಷಿಗರಿಗೆ ಹಾಗೂ ಕನ್ನಡಿಗರಿಗೆ ಪರಿಚಯಿಸಿಕೊಡುವ ಉದ್ದೇಶದಿಂದ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದರು.
ಸಭೆಯಲ್ಲಿ ಸ್ವಾಗತ, ಆರ್ಥಿಕ, ಆಹಾರ, ಮೆರವಣಿಗೆ, ಪ್ರಚಾರ, ಸಾಂಸ್ಕೃತಿಕ, ವೇದಿಕೆ ಮುಂತಾದ ವಿಷಯದ ಕುರಿತು ಉಪ ಸಮಿತಿ ಪದಾಧಿಕಾರಿಗಳು ಚರ್ಚಿಸಿದರು. ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಉಪಾಧ್ಯಕ್ಷ ಬಟ್ಟಿರ ಈರಪ್ಪ, ಕಾರ್ಯದರ್ಶಿ ಕುಯ್ಯುಮುಡಿ ಜಯಪ್ರಕಾಶ್, ಹಿರಿಯರಾದ ಕೀಜನ ನಾಣಯ್ಯ ಹಾಜರಿದ್ದರು.
23ರಂದು ಅರೆಭಾಷೆ ಸಾಹಿತ್ಯ ಸಮ್ಮೇಳನ

ಸಾಹಿತ್ಯ ಸಮ್ಮೇಳನ, ಶನಿವಾರಸಂತೆ