ಜಿಲ್ಲೆ

23ರಂದು ಅಭ್ಯಾಸಿ ಕನ್ನಡ ಹಬ್ಬ

ಚಾಮರಾಜನಗರ: ಅಭ್ಯಾಸಿ ಟ್ರಸ್ಟ್ ವತಿಯಿಂದ ನಗರದಲ್ಲಿ ನ.23ರಂದು ಅಭ್ಯಾಸಿ ಕನ್ನಡ ಹಬ್ಬ ಮತ್ತು ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಅಂದು ಸಂಜೆ 4 ಗಂಟೆಗೆ ಶುರುವಾಗುವ ಸಮಾರಂಭವನ್ನು ಹಿರಿಯ ರಂಗ ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ಉದ್ಘಾಟಿಸುವರು. ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ(ಮಂಜು ಕೋಡಿಉಗನೆ) ಅಧ್ಯಕ್ಷತೆ ವಹಿಸುವರು. ಸಂಗೀತ ವಿದ್ವಾಂಸ ಜೆ.ಜಾಯ್‌ುಲ್ ಜಯಶೇಖರ್ ಅವರಿಗೆ ಸಂಗೀತ ನಿರ್ದೇಶಕ ಎ.ಎಸ್.ಪ್ರಸನ್ನಕುಮಾರ್ ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡುವರು. ಜವಳಿ ವರ್ತಕರ ಸಂಘದ ಅಧ್ಯಕ್ಷ ಬಿ.ವಿ.ವೆಂಕಟನಾಗಪ್ಪ ಶೆಟ್ಟಿ, ವಕೀಲ ಪುಟ್ಟಸ್ವಾಮಿ ರಾಮಸಮುದ್ರ, ಸಾಹಿತಿ ಕೆ.ಸಿರಿ ಪಾಲ್ಗೊಳ್ಳುವರು.

ಇದೇ ವೇಳೆ ಅಭ್ಯಾಸಿ ಟ್ರಸ್ಟ್ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಕೀಬೊರ್ಡ್ ವಾದ್ಯ ಸಂಗೀತ, ಡಾ.ಎಂ.ಎಸ್.ಮೂರ್ತಿ ಅವರ ‘ಯಶೋಧರೆ ಮಲಗಿರಲಿಲ’್ಲ, ಮಂಜು ಕೋಡಿಉಗನೆ ಅವರ ‘ಕಂಡಾಯದ ಕೋಳಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ. ನಿರೂಪಣೆ ಕಲೆ ನಟರಾಜ್, ಗಾಯನ ಎಸ್.ಜಿ.ಮಹಾಲಿಂಗ ಗಿರ್ಗಿ, ಕೊಂಬು ಕಹಳೆ ರವಿಚಂದ್ರಪ್ರಸಾದ್, ಸಂಗೀತ ಸಾಂಗತ್ಯ ಕೃಷ್ಣ ಚೈತನ್ಯ, ಪ್ರಸಾಧನ, ಬೆಳಕು ರಂಗನಾಥ, ರಂಗ ಪರಿಕರ ಮಧುಸೂದನ್ ಹೊಸೂರು, ಸಂಗೀತ ಮತ್ತು ನಿರ್ದೇಶಕವನ್ನು ಅಭ್ಯಾಸಿ ಟ್ರಸ್ಟ್‌ನ ಅಧ್ಯಕ್ಷ ಕಿರಣ್ ಗಿರ್ಗಿ ಮಾಡಲಿದ್ದಾರೆ.