ಮುತ್ತಿನಕೊಪ್ಪ ಗ್ರಾಪಂ ಉಪ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಎನ್.ಎಂ.ಕಾಂತರಾಜ್, ವಿ.ನೀಲೇಶ್, ಪ್ರವೀಣ್ ಇದ್ದರು. 
ಜಿಲ್ಲೆ

23ಕ್ಕೆ ಮುತ್ತಿನಕೊಪ್ಪ ಗ್ರಾಪಂ ಉಪ ಚುನಾವಣೆ

ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ತೆರವಾದ 2 ಸ್ಥಾನಕ್ಕಾಗಿ ನ.23ರಂದು ಉಪ ಚುನಾವಣೆ ನಡೆಯಲಿದೆ.

ಬೈರಾಪುರ ಹಾಗೂ ಕೆ.ಕಣಬೂರು ಕ್ಷೇತ್ರದ ಸದಸ್ಯರು ಮೃತಪಟ್ಟಿದ್ದರಿಂದ ಎರಡೂ ಕ್ಷೇತ್ರದ ಸದಸ್ಯರ ಸ್ಥಾನ ತೆರವಾಗಿತ್ತು. ಆ ಎರಡೂ ಸ್ಥಾನಕ್ಕಾಗಿ ಉಪ ಚುನಾವಣೆ ನಡೆಯಲಿದೆ. ಎರಡೂ ಕ್ಷೇತ್ರದಲ್ಲೂ ಸಾಮಾನ್ಯ ಮೀಸಲಾತಿ ಇದ್ದು ಶನಿವಾರ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆಯ ದಿನವಾಗಿತ್ತು. ಚುನಾವಣಾಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಎಇಇ ಸಾಗರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸೋಮವಾರ ಬಿಜೆಪಿ ಬೆಂಬಲಿತರಾದ ಆಕಾಶ್, ದೇವಪ್ಪ ಅವರು ಬೈರಾಪುರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಕಣಬೂರು ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅತೀಶ್ ನಾಮಪತ್ರ ಸಲ್ಲಿಸಿದರು. ಬಿಜೆಪಿ ಮುಖಂಡರಾದ ವಿ.ನೀಲೇಶ್, ಬಿಜೆಪಿ ತಾಲೂಕು ವಕ್ತಾರ ಎನ್.ಎಂ.ಕಾಂತರಾಜ್, ಪ್ರವೀಣ್ ಇತರರಿದ್ದರು.