ಜಿಲ್ಲೆ

ದರ್ಪನ್ ಫೌಂಡೇಷನ್‌ನಿಂದ 23ನೇ ಉಪನಿಷತ್ತು ಕಾರ್ಯಕ್ರಮ

ಹರೀಶ್​​ ಕೆ.ಸಿ.

ಬೆಂಗಳೂರು: ದರ್ಪನ್ ಫೌಂಡೇಷನ್ 23ನೇ ಉಪನಿಷತ್ತು ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಆಯೋಜಿಸಿತ್ತು.

‘ಸ್ವಧರ್ಮವನ್ನು ಅನ್ವೇಷಿಸುವುದು’ ವಿಷಯ ಬಗ್ಗೆ ಗುರೂಜಿ ನಂದಕಿಶೋರ್ ತಿವಾರಿ ಮಾತನಾಡಿದರು. ಉಪನಿಷದಿ ಸಂಪ್ರದಾಯದ ವಿವಿಧ ಆಯಾಮಗಳನ್ನು ವಿವರಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಒಬ್ಬರ ಸ್ವಧರ್ಮವನ್ನು ಹೇಗೆ ತಿಳಿದುಕೊಳ್ಳುವುದು ಎಂಬ ಪ್ರಶ್ನೆಗೆ ಉತ್ತರಿಸಿದ ಗುರೂಜಿ, ಒಬ್ಬರ ಸ್ವಭಾವದಲ್ಲಿ ಏನು ಮಾಡಿದರೂ ಕಳಂಕ ಉಂಟಾಗುವುದಿಲ್ಲ. ಸ್ವಭವ್ ಮೂಲಭೂತವಾಗಿ ಅಧ್ಯಾತ್ಮ ಎಂದು ಹೇಳಿದರು.

ಧರ್ಮ ಹಾಗೂ ಧರ್ಮದ ನಡುವಿನ ವ್ಯತ್ಯಾಸ ಸೇರಿ ಇನ್ನಿತರ ವಿಚಾರಗಳ ಬಗ್ಗೆ ಮೆಲುಕು ಹಾಕಿದರು. ಶಿಕ್ಷಣದ ಭಾಗವಾಗಿ ಆಧ್ಯಾತ್ಮಿಕತೆ ತಯಾರಿಸುವುದು ಹೇಗೆ? ಭಾರತೀಯ ಇತಿಹಾಸ ಹಾಗೂ ಸಾಹಿತ್ಯ ಓದಲು ಪ್ರೋತ್ಸಾಹಿಸುವುದು ಸೇರಿದಂತೆ ಇನ್ನಿತರ ಪ್ರಶ್ನೆಗಳನ್ನು ಬರಹಗಾರ ಹಾಗೂ ಲಂಡನ್‌ನ ನೆಹರು ಕೇಂದ್ರದ ನಿರ್ದೇಶಕ ಅಮಿಶ್ ತ್ರಿಪಾಠಿ ಕೇಳಿದರು.