ಬೆಂಗಳೂರು: ಪಂಟೊಮಾಥ್ಸ್ನ ಭಾರತ್ ವ್ಯಾಲ್ಯು ಫಂಡ್ (ಬಿವಿಎಫ್), ಕೋಲ್ಕತ್ತಾ ಮೂಲದ ಹಲ್ದಿರಾಮ್ ಭುಜಿಯಾವಾಲಾ ಲಿಮಿಟೆಡ್ನಲ್ಲಿ 235 ಕೋಟಿ ರೂ.ಹೂಡಿಕೆ ಮಾಡಿದೆ. ಈ ಮೂಲಕ ಖಾಸಗಿ ಹೂಡಿಕೆದಾರರಿಗೆ ಷೇರು ಮಾರಾಟದ ಸುತ್ತನ್ನು ಪೂರ್ಣಗೊಳಿಸಿದಾಗಿ ಹಲ್ದಿರಾಮ್ ಭುಜಿಯಾವಾಲಾ ಲಿ.ಪ್ರಕಟಿಸಿದೆ.
ಕುರುಕುಲು ತಿಂಡಿ, ಉಪ್ಪುಖಾರದ ಉತ್ಪನ್ನಗಳ ಉದ್ಯಮದಲ್ಲಿ 6 ದಶಕಗಳಗಿಂತ ಅಧಿಕ ಕಾಲ ಗ್ರಾಹಕರಿಗೆ ಸೇವೆ ನೀಡುತ್ತಾ ಬರುತ್ತಿರುವ ಹಲ್ದಿರಾಮ್ ಭುಜಿಯಾವಾಲಾ ಲಿ., ತನ್ನ ಉತ್ಪನ್ನಗಳನ್ನು ಪ್ರಭುಜಿ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. 100ಕ್ಕೂ ಹೆಚ್ಚು ಉತ್ಪನ್ನಗಳಿವೆ. ವಿಶೇಷವಾಗಿ ಪೂರ್ವ, ಈಶಾನ್ಯ ಭಾರತದ ಮಾರುಕಟ್ಟೆಗಳಲ್ಲಿ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದೆ.
ಬಿವಿಎಫ್ ಬೆಂಬಲದೊಂದಿಗೆ ನಮ್ಮ ಉದ್ಯಮದ ಒಳನೋಟ ಬಳಸಿಕೊಂಡು ಷೇರುದಾರರ ಮೌಲ್ಯ ಹೆಚ್ಚಿಸಲು ಮತ್ತು ವಹಿವಾಟಿನ ಬೆಳವಣಿಗೆ ಮುಂದುವರೆಸಲಾಗುವುದು. ಈ ಪಾಲುದಾರಿಕೆ ದೀರ್ಘಾವಧಿಯ ಆರ್ಥಿಕ ಪ್ರಯೋಜನ ಸೃಷ್ಟಿಸಲು ಭದ್ರ ಬುನಾದಿ ಹಾಕಲಿದೆ. ಎಲ್ಲ ಭಾಗಿದಾರರಿಗೆ ಸಮೃದ್ಧ ಭವಿಷ್ಯ ಖಾತ್ರಿಪಡಿಸುತ್ತದೆ ಎಂದು ಹಲ್ದಿರಾಮ್ ಭುಜಿಯಾವಾಲಾ ಲಿ. ಎಂಡಿ ಮನಿಶ್ ಅಗರ್ವಾಲ್ ಅವರು ಹೇಳಿದ್ದಾರೆ.