Shivasharane Hemaraddi Mallamma Jayanti 
ಜಿಲ್ಲೆ

23 ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ

ಗಿರೀಶ ಸಗರ

ಸಿಂದಗಿ: ಜವಾಹರ ನವೋದಯ ಶಾಲೆಗಳ 6ನೇ ವರ್ಗದ ಪ್ರವೇಶಕ್ಕಾಗಿ ನಡೆದ ಪರೀೆಯಲ್ಲಿ ನಗರದ ಆರ್​.ಡಿ. ಕುಲಕರ್ಣಿ ಕೋಚಿಂಗ್​ ಕ್ಲಾಸ್​ನ 23 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಸತೀಶ ಗಡ್ಡಿ, ಪ್ರಮೋದ ತಾಳಕೇರಿ, ಜೀವನ ಯಂಕಂಚಿ, ಆರ್ಯನ ಕಲಶೆಟ್ಟಿ, ಸಾಮ್ರಾಟ ಪೂಜಾರಿ, ಪ್ರೀತಮ ಭೋಸಲೆ, ಸುದನರಾಜ ಪವಾರ, ಆದರ್ಶ ಕಲ್ಮನಿ, ಅಭಯ ಕಲ್ಮನಿ, ಗುರುರಾಜ ಬಡದಾಳ, ರಾಜು ಇಂಗಳೆ, ಶರಣು ಪೂಜಾರಿ, ಶರಣಗೌಡ ಕೊಣಸಿರಸಗಿ, ಹರ್ಷ ಪೊಲೀಸ್​ ಪಾಟೀಲ, ಸಮರ್ಥ ಚನ್ನಾ, ಮಾಯಾವತಿ ಚವ್ಹಾಣ, ನಮ್ರತಾ ಕತ್ತಿ, ಚೈತನ್ಯ ತೊರವಿ, ವೇದಾ ಕರ್ಕಳ್ಳಿಮಠ, ಅನುಷ್ಕಾ ಸೋಮನಕಟ್ಟಿ, ಸ್ವಾತಿ ಕೊಳಕೂರ, ಶ್ರಾವಣಿ ಹಿರೇಮಠ, ತನುಜಾ ಚವ್ಹಾಣ ಆಯ್ಕೆಯಾಗಿದ್ದಾರೆ.

ಮಕ್ಕಳ ಸಾಧನೆಗೆ ಆರ್​.ಡಿ. ಕುಲಕರ್ಣಿ ಕೋಚಿಂಗ್​ ಶಾಲೆಯ ಸಂಚಾಲಕ ಆರ್​.ಡಿ. ಕುಲಕರ್ಣಿ, ಪಿ.ಡಿ. ಕುಲಕರ್ಣಿ, ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರು, ಮುಖ್ಯಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.