ಜಿಲ್ಲೆ

ನಕಲಿ ಕಂಪನಿ ಮೂಲಕ 23.90 ಲಕ್ಷ ರೂ. ವಂಚನೆ

ಮೈಸೂರು: ನಕಲಿ ಕಂಪನಿ ಮೂಲಕ ಟ್ರೇಡಿಂಗ್ ಪ್ರಯತ್ನಿಸಿದ ನಗರದ ವಿದ್ಯಾರಣ್ಯಪುರಂ ನಿವಾಸಿ ಶರತ್‌ಕುಮಾರ್ 23.90 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ಇವರು ಮೊಬೈಲ್‌ಗೆ ಬಂದ ವಾಟ್ಸಾಪ್ ಮೇಸೆಜ್‌ನಲ್ಲಿ ಕಂಪನಿಯೊಂದರ ಲಿಂಕ್ ಕ್ಲಿಕ್ ಮಾಡಿದ್ದಾರೆ. ನಂತರ ಅವರ ವಾಟ್ಸಾಪ್ ಗ್ರೂಪ್‌ಗೆ ಸೇರಿ ಹಣ ಹೂಡಿಕೆ ಮಾಡಿದ್ದಾರೆ.

ಮೊದಲಿಗೆ ಸ್ವಲ್ಪಮಟ್ಟದ ಹಣ ಬಂದಿದೆ. ನಂತರ ಹಂತ ಹಂತವಾಗಿ 23,90 ಲಕ್ಷ ರೂ. ಹಣವನ್ನು ಅವರ ಖಾತೆಗೆ ಜಮೆ ಮಾಡಿದ್ದಾರೆ. ನಂತರ ಯಾವುದೇ ಲಾಭ ಅಥವ ಅಸಲು ಹಣ ಬಂದಿಲ್ಲ. ಆಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದ್ದು, ದೂರು ನೀಡಿದ್ದಾರೆ.

ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.