ಶಿವಮೊಗ್ಗ ಸೈಬರ್ ಠಾಣೆ. 
ಜಿಲ್ಲೆ

ಪಾರ್ಟ್‌ಟೈಮ್ ಜಾಬ್ ಹೆಸರಲ್ಲಿ 23.61 ಲಕ್ಷ ರೂ. ವಂಚನೆ

ಶಿವಮೊಗ್ಗ: ನೌಕರಿ ಡಾಟ್ ಕಾಮ್ ಹೆಸರಲ್ಲಿ ಪಾರ್ಟ್‌ಟೈಮ್ ಜಾಬ್ ನೀಡುವುದಾಗಿ ನಂಬಿಸಿ ಖಾಸಗಿ ವಿಮಾ ಸಂಸ್ಥೆಯ ಏರಿಯಾ ಮ್ಯಾನೇಜರ್‌ಗೆ ಬರೋಬ್ಬರಿ 23.61 ಲಕ್ಷ ರೂ. ಆನ್‌ಲೈನ್ ಮೂಲಕ ವಂಚಿಸಲಾಗಿದೆ.ವಿಮಾ ಸಂಸ್ಥೆಯ 32 ವರ್ಷದ ಏರಿಯಾ ಮ್ಯಾನೇಜರ್ ಹಣ ಕಳೆದುಕೊಂಡವರು.

ಆಕ್ಸಿಸ್ ಬ್ಯಾಂಕ್, ಕರ್ನಾಟಕ ಹಾಗೂ ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಅವರು ಮೂರು ಬ್ಯಾಂಕ್‌ಗಳಿಗೂ ಒಂದೇ ಮೊಬೈಲ್ ನಂಬರ್ ಲಿಂಕ್ ಮಾಡಿದ್ದರು. 2023ರ ಡಿ.17ರಂದು ಸುಜಿತ್ ಎಂಬುವರಿಂದ ಟೆಲಿಗ್ರಾಂ ಅಪ್ಲಿಕೇಶನ್ ಮೂಲಕ ಪಾರ್ಟ್‌ಟೈಮ್ ಕೆಲಸದ ಬಗ್ಗೆ ಮೊಬೈಲ್ ನಂಬರ್‌ಗೆ ಮೆಸೇಜ್ ಬಂದಿತ್ತು. ಎರಡು ನಂಬರ್‌ಗಳಿಂದ ಫೋನ್ ಮಾಡಿ ನೌಕರಿ ಡಾಟ್ ಕಾಮ್‌ನಿಂದ ಪಾರ್ಟ್‌ಟೈಮ್ ಜಾಬ್‌ಗೆ ನಿಮ್ಮ ಹೆಸರು ಶಾರ್ಟ್‌ಲಿಸ್ಟ್ ಮಾಡಿದ್ದು ಸಿಮಿಲರ್ ವೆಬ್ ಕಂಪನಿಯ ಲಿಂಕ್ ಮೂಲಕ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಶಾಪಿಂಗ್ ಮಾರ್ಟ್‌ನಲ್ಲಿ ಕೆಲ ಟಾಸ್ಕ್‌ಗಳನ್ನು ಪೂರೈಸಿದರೆ ಹೆಚ್ಚಿನ ಲಾಂಭಾಂಶ ಸಿಗಲಿದೆ ಎಂದು ನಂಬಿಸಿದ್ದರು.
ಒಂದು ಟಾಸ್ಕ್ ಕೊಟ್ಟು 968 ರೂ. ಖಾತೆಗೆ ಜಮಾ ಮಾಡಿದ್ದರು. ಬಳಿಕ 10 ಸಾವಿರ ರೂ. ಡೆಫಾಸಿಟ್ ಮಾಡಲು ಹೇಳಿ ಟಾಸ್ಕ್ ನೀಡಿ 19,213 ರೂ. ಹಾಕಿದ್ದರು. ಹೆಚ್ಚಿನ ಲಾಂಭಾಂಶ ಸಿಗಲಿದೆ ಎಂಬ ಕಾರಣಕ್ಕೆ ಹಂತ ಹಂತವಾಗಿ 23,61, 775 ರೂ. ಹಾಕಿದ್ದರು. ಅಂತಿಮವಾಗಿ ಮೋಸ ಹೋಗಿರುವುದು ಗೊತ್ತಾಗಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.