ಖಾನಾಪುರ: ನಗರದ ಪುರಾತನ ಶ್ರೀಗೌಡ ಪಾದಾಚಾರ್ಯ ಸಂಸ್ಥಾನ ಕಾವಲೆ ಮಠದಲ್ಲಿ ಮಠದ ಪುನರ್ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು ಡಿ.22ರಿಂದ 27ರವರೆಗೆ ಆಯೋಜಿಸಲಾಗಿದೆ ಎಂದು ಮಠದ ಟ್ರಸ್ಟಿ ಶರದ ಕೇಸ ಕಾಮತ ಹೇಳಿದರು.
ಪಟ್ಟಣದ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶಿವಾನಂದ ಸರಸ್ವತಿ ಸ್ವಾಮೀಜಿ, ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿವೆ. 22ರಂದು ಸಂಜೆ 5ಕ್ಕೆ ರಾಕ್ಷೋಗನ ಧಾರ್ಮಿಕ ಕಾರ್ಯಕ್ರಮದೊಂದಿಗೆ ಉತ್ಸವ ಆರಂಭವಾಗಲಿದೆ. 23ರಂದು ಬೆಳಗ್ಗೆ 8ಕ್ಕೆ ವಾಸ್ತುಶಾಂತಿ ಹೋಮ-ಹವನ, ದಿನವಿಡೀ ಶಾಂತಿಸೂಕ್ತ ಸಿದ್ಧಿ ವಿಧಿಹವನ ಹಾಗೂ 24ರಂದು ಅನೇಕ ಧಾರ್ಮಿಕ ಕಾರ್ಯಕ್ರಮಗಳಿವೆ ಎಂದರು.
25ರಂದು ಬೆಳಗ್ಗೆ ಉಮಾ ಮಹೇಶ್ವರ ಹಾಗೂ ಯತಿವರ್ಯ ಪ್ರತಿಷ್ಠಾ ದೇವರ ಆರಾಧನೆ, ಶಿಖರ ಕಲಶ ಪ್ರತಿಷ್ಠಾಪನೆ, ಯತಿವರ್ಯ ಸಮಾಧಿ ಪ್ರತಿಷ್ಠಾಪನೆ, ಹಾಗೂ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. 26ರಂದು ಬೆಳಗ್ಗೆ ಮಂಗಳಚರಣ ಪುಣ್ಯಾಹ್ವಾಚನ ಆಚಾರ್ಯ ವರುಣ ಲಘುರುದ್ರ ಮನುಸೂಕ್ತ ಪಠಣ, ಸಂಜೆ ಅಷ್ಟಾವಧಾನ ಸೇವಾ ಕಾರ್ಯಕ್ರಮ ಹಾಗೂ 27ರಂದು ಬೆಳಗ್ಗೆ ಏಳಕ್ಕೆ ಮಂಗಳಾಚರಣೆ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಜೆ ಉತ್ಸವ ಸಂಪನ್ನಗೊಳ್ಳಲಿದೆ. 25ರಿಂದ 27ರ ವರೆಗೆ ಭಕ್ತರಿಗೆ ಮಹಾಪ್ರಸಾದ ಏರ್ಪಡಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ದೇವರ ಕೃಪೆಗೆಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದರು.
ಪ್ರಶಾಂತ ಖಾಸನೀಸ್, ಹರ್ಷದ್ ವಾಗ್ಲೆ, ಮೀರಜ್ ಪಾಲೇಕರ, ಸುಧೀರ ದೇಶಪಾಂಡೆ, ಪಂಕಜ ದಲಾಲ, ಪ್ರಮೋದ ದಲಾಲ, ಉಮೇಶ ದೇಶಪಾಂಡೆ, ವಿಕಾಸ ವರ್ದೆ, ದಿಲೀಪ ಶಹಾಪುರಕರ, ಮಂಗೇಶ ದೇಶಪಾಂಡೆ ಇತರರು ಇದ್ದರು.