ಜಿಲ್ಲೆ

22ರಂದು ಬೆಳಗಾವಿಯಲ್ಲಿ ಪಂಚಮಸಾಲಿ ವಕೀಲರ ಸಮಾವೇಶ

ಮೂಡಲಗಿ: ಮೂರೂವರೆ ವರ್ಷದಿಂದ ಪಂಚಮಸಾಲಿ ಮೀಸಲಾತಿಗಾಗಿ ನಿರಂತರ ಹೋರಾಟ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಯಾವುದೆ ಸ್ಪಂದನೆ ಸಿಗುತ್ತಿಲ್ಲ. ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಸೆ.22 ರಂದು ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ವಕೀಲರ ಪ್ರಥಮ ರಾಜ್ಯ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯ ಬಸವಜಯ ಮತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದ ಲಕ್ಷಿ$್ಮನಗರದ ನೇಗಿಲಯೋಗಿಾ ಮ್​ರ್ಹೌಸ್​ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಂಚಮಸಾಲಿಗರ 2ಎ ಮೀಸಲಾತಿ ಹೋರಾಟದಲ್ಲಿ ಶಾಸಕಾಂಗವೂ ಸ್ಪಂದಿಸುತ್ತಿಲ್ಲ. ಹೀಗಾಗಿ ಕಾನೂನಾತ್ಮಕ ಬೆಂಬಲ ಪಡೆಯಲು ವಕೀಲರನ್ನು ಸಂಟಿಸುತ್ತಿದ್ದೇವೆ. ಈಗಾಗಲೇ ಎಲ್ಲೆಡೆ ನೂತನ ಜಿಲ್ಲಾ ಟಕಗಳನ್ನು ರಚಿಸಲಾಗುತ್ತಿದ್ದು, ಹಿರಿಯ ವಕೀಲರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡಿದ್ದೇವೆ. ಬೆಳಗಾವಿ ಸಮಾವೇಶದಲ್ಲಿ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಸುಮಾರು 5,000 ವಕೀಲರು ಪಾಲ್ಗೊಳ್ಳಲಿದ್ದಾರೆ. ಅಂದು ಕೆಲ ಕಠಿಣ ರ್ನಿಣಯಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.

ಸಂಟನೆಯ ಜಿಲ್ಲಾ ಕಾರ್ಯಧ್ಯ ನಿಂಗಪ್ಪ ಪಿರೋಜಿ, ವಕೀಲರಾದ ಆರ್​.ಆರ್​. ಭಾಗೋಜಿ, ಎ.ಎನ್​. ಕೌಜಲಗಿ, ಎಸ್​.ಎಸ್​. ತುಪ್ಪದ, ಸಂಗಮೇಶ ಕೌಜಲಗಿ, ಬಿ.ಬಿ. ಹಂದಿಗುಂದ, ಶೇಖರ ತೇಲಿ, ಹೊಳಪ್ಪ ಶಿವಾಪೂರ ಉಪಸ್ಥಿತರಿದ್ದರು.