ಚಿತ್ರದುರ್ಗ:ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮೇ 22ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿವಿಧ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪುರುಷ,ಮಹಿಳಾ ಅಭ್ಯರ್ಥಿಗಳ ನೇರ ಆಯ್ಕೆಗಾಗಿ ಸಂದರ್ಶನ ಏರ್ಪಡಿಸ ಲಾಗಿದೆ. ಎಸ್ಸೆಸ್ಸೆಲ್ಸಿ,ಪಿಯುಸಿ ಡಿಪ್ಲೊಮಾ,ಐಟಿಐ ಅಥವಾ ಯಾವುದೇ ಪದವಿ ಪಡೆದಿರುವ 18-30 ವರ್ಷದೊಳಗಿನ ಅಭ್ಯರ್ಥಿಗಳು ಸಂದರ್ಶನ ದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ(7022459064,8105619020 ಹಾಗೂ 9945587060)ವನ್ನು ಸಂಪರ್ಕಿಸಬಹುದೆ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಕಿಶೋರ್‌ಕುಮಾರ್ ತಿಳಿಸಿದ್ದಾರೆ.