ಚಿತ್ರದುರ್ಗ:ಜಿಲ್ಲಾ ಮೇದಾರ ಸಮಾಜದಿಂದ ಚಂದ್ರವಳ್ಳಿ ಹುಲೆಗುಂದಿ ಶ್ರೀ ಕುಕ್ಕವಾಡೇಶ್ವರಿ ಅಮ್ಮನವರ ಶ್ರಾವಣ ಮಾಸದ ಪೂಜಾ ಮ ಹೋತ್ಸವವನ್ನು ಆ.22ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಮೇದಾರ ಕೇತೇಶ್ವರ ಮಠದ ಶ್ರೀ ಇಮ್ಮಡಿ ಬಸವಪ್ರಭು ಮೇದಾರ ಕೇತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ,ನಗರಸಭೆ ಸದಸ್ಯರಾದ ಕೆ.ಬಿ.ಸುರೇಶ್,ಡಿ.ಮಲ್ಲಿಕಾರ್ಜುನ್,ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಜಿಲ್ಲಾ ಕುರುಬರ ಸಮಾಜದ ಅಧ್ಯಕ್ಷ ಶ್ರೀರಾಮ್ ಆಗಮಿಸಲಿದ್ದಾರೆ. ಭಕ್ತರು,ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇ ಕೆಂದು ಸಮಾಜದ ಕಾರ‌್ಯದರ್ಶಿ ರಾಘವೇಂದ್ರ ಕೋರಿದ್ದಾರೆ.