ಜಿಲ್ಲೆ

ಕೊಂಡೆವೂರು ಮಠದಲ್ಲಿ 22ನೇ ವರ್ಧಂತ್ಯುತ್ಸವ

ಸೌಮ್ಯ ಆರ್

ಬದಿಯಡ್ಕ: ಕೊಂಡೆವೂರು ಮಠದಲ್ಲಿ 22ನೇ ವರ್ಧಂತ್ಯುತ್ಸವ, 19ನೇ ವರ್ಷದ ಭಜನಾ ಸಪ್ತಾಹದ ದೀಪ ಪ್ರಜ್ವಲನೆ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಗಾಯತ್ರಿ ದೇವಿ, ಭಗವಾನ್ ನಿತ್ಯಾನಂದ ಗುರುದೇವರ ಪ್ರತಿಷ್ಠಾಪನಾ ವರ್ಧಂತಿ ಕಾರ್ಯಕ್ರಮ ನಡೆಯಿತು.

ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ ಆಚಾರ್ಯತ್ವದಲ್ಲಿ ಫೆ.22ರಂದು ಚಂಡಿಕಾ ಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು. ಅದೇ ದಿನ ಸೂರ್ಯಾಸ್ತ 6.37ಕ್ಕೆ ಪರಮಪೂಜ್ಯ ಶ್ರೀಗಳು ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ ನೀಡಿದರು.