ಜಿಲ್ಲೆ

ಬೈಕ್ ಸವಾರನಿಗೆ 22,500 ರೂ. ದಂಡ

ಭಟ್ಕಳ: ವಾಹನ ಪರವಾನಗಿ ರಹಿತ ಹಾಗೂ ಮದ್ಯ ಸೇವಿಸಿ ಬೈಕ್ ಚಲಾಯಿಸಿದ ಸವಾರನಿಗೆ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯವು ಬುಧವಾರ 22,500 ರೂ. ದಂಡ ವಿಧಿಸಿದೆ.

ಭೋರಾಸಿಂಗ್ ಎಂಬುವವರಿಗೆ ದಂಡ ವಿಧಿಸಲಾಗಿದೆ. ಡಿ.31ರಂದು ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಕ್ರಾಸ್ ಸಮೀಪ ನಗರ ಠಾಣೆಯ ಪಿಎಸ್‌ಐ ನವೀನ ನಾಯ್ಕ ಅವರು ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಸವಾರ ಮದ್ಯ ಸೇವನೆ ಮಾಡಿದ್ದು ದೃಢಪಟ್ಟಿತ್ತು. ಚಾಲನಾ ಪರವಾನಗಿ ಇಲ್ಲದಿರುವುದು, ಅಪಾಯಕಾರಿ ಚಾಲನೆ, ಹೆಲ್ಮೆಟ್ ಧರಿಸದಿರುವುದು ಹಾಗೂ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತ ವರ್ತಿಸಿದ್ದ. ಹೀಗಾಗಿ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ತಪ್ಪಿತಸ್ಥ ಸವಾರನಿಗೆ ದಂಡ ವಿಧಿಸಿದ್ದಾರೆ.