????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

22 ಶಾಲೆಗಳಿಗೆ ಅಡುಗೆ ಕೋಣೆಯಿಲ್ಲ

ಹನೂರು: ಹನೂರು ಶೈಕ್ಷಣಿಕ ವಲಯದ 22 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅಕ್ಷರ ದಾಸೋಹದ ಅಡುಗೆ ಕೋಣೆ ಕೊರತೆ ಇದ್ದು, ಸುರಕ್ಷತೆ ಇಲ್ಲದಂತಾಗಿದೆ. ಇದರಿಂದ ಸಮಸ್ಯೆಯ ನಡುವೆಯೇ ಅಡುಗೆ ತಯಾರಿಸಬೇಕಾದ ಸ್ಥಿತಿ ಇದೆ.

ಸರ್ಕಾರ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ಉದ್ದೇಶದಿಂದ ಬಿಸಿಯೂಟ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಶೈಕ್ಷಣಿಕ ವಲಯದಲ್ಲಿ 96 ಕಿರಿಯ ಪ್ರಾಥಮಿಕ ಶಾಲೆ, 105 ಹಿರಿಯ ಹಾಗೂ 44 ಪ್ರೌಢಶಾಲೆಗಳಿದ್ದು, ಇದರಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಆರಂಭದಲ್ಲಿ ಶಾಲಾ ಕೊಠಡಿಗಳಲ್ಲೇ ಅಡುಗೆ ತಯಾರಿಸಲಾಗುತ್ತಿತ್ತು. ಬಳಿಕ ಬಿಸಿಯೂಟ ತಯಾರಿಸುವುದಕ್ಕಾಗಿಯೇ ಕೆಲವು ಶಾಲೆಗಳಲ್ಲಿ ಪ್ರತ್ಯೇಕ ಅಡುಗೆ ಕೋಣೆಗಳನ್ನು ನಿರ್ಮಿಸಲಾಯಿತು. ವಲಯದ ಪ್ರೌಢಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಅಡುಗೆ ಕೋಣೆಯ ಸಮಸ್ಯೆ ಇಲ್ಲ. ಆದರೆ ಕೆಲವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇನ್ನು ಸಹ ಪ್ರತ್ಯೇಕ ಅಡುಗೆ ಕೋಣೆಯೇ ಇಲ್ಲ. ಇದರಿಂದ ಸಿಬ್ಬಂದಿ ಸಮಸ್ಯೆ ನಡುವೆಯೇ ಅಡುಗೆ ತಯಾರಿಸುತ್ತಿದ್ದಾರೆ.

ಇನ್ನು ಕೆಲವು ಶಾಲೆಗಳಲ್ಲಿ ನಿರ್ಮಿಸಿರುವ ಅಡುಗೆ ಕೋಣೆ ಶಿಥಿಲ ಹಂತವನ್ನು ತಲುಪಿದೆ. ಇಲ್ಲಿಯೇ ಬಿಸಿಯೂಟವನ್ನು ತಯಾರಿಸುತ್ತಿದ್ದು, ಸುರಕ್ಷತೆ ಇಲ್ಲವಾಗಿದೆ. ಇದರಿಂದ ಶಾಲೆಗಳಲ್ಲಿ ಸುಸಜ್ಜಿತ ಅಡುಗೆ ಕೋಣೆಯ ಅನಿವಾರ್ಯವೂ ಇದೆ. ಸರ್ಕಾರಿ ಪ್ರೌಢಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಅಡುಗೆ ಕೋಣೆಯ ಸಮಸ್ಯೆ ಇಲ್ಲ.

ಸರ್ಕಾರಿಂದ ನಿರ್ಮಾಣವಾಗಿಲ್ಲ

ಶೈಕ್ಷಣಿಕ ವಲಯದ ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೊರಸಾಣೆ, ಕುರಟ್ಟಿಹೊಸೂರು, ಹಳೆ ಮಾರ್ಟಳ್ಳಿ, ಒಡೆಯರಪಾಳ್ಯ, ಹಲಗಾಪುರ, ಸುಳವಾಡಿ, ಡಿ.ಎಂ ಸಮುದ್ರ, ಮೇಗಲೂರು, ಕೆ.ವಿ.ಎನ್ ದೊಡ್ಡಿ, ಹೊಸಹಳ್ಳಿ, ಶೆಟ್ಟಳ್ಳಿ, ಕೊಂಬುಡಿಕ್ಕಿ, ದಂಟಳ್ಳಿ, ಕೌದಳ್ಳಿ ಹಾಗೂ ರಾಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಒಟ್ಟು 22 ಶಾಲೆಗಳಲ್ಲಿ ಸರ್ಕಾರದಿಂದ ಅಡುಗೆ ಕೋಣೆ ನಿರ್ಮಾಣವಾಗಿಲ್ಲ. ಇದರಿಂದ ಶಾಲಾ ಕೊಠಡಿ, ಹಾಗೂ ಆಸುಪಾಸಿನಲ್ಲಿ ಅಡುಗೆ ತಯಾರಿಸಲಾಗುತ್ತಿದೆ.

ಸುರಕ್ಷತೆಯೇ ಇಲ್ಲ:

ಬಿಸಿಯೂಟದ ಅಡುಗೆ ತಯಾರಿಕೆಗೆ ಪ್ರತ್ಯೇಕ ಕೋಣೆ ಇಲ್ಲದ ಪರಿಣಾಮ ಕೆಲವು ಶಾಲೆಗಳಲ್ಲಿ ಚಿಕ್ಕದಾದ ಕೊಠಡಿಗಳಲ್ಲೇ ಗ್ಯಾಸ್ ಸಿಲಿಂಡರ್ ಇರಿಸಿ ಅಡುಗೆ ಸಿದ್ಧಪಡಿಸಲಾಗುತ್ತಿದೆ. ಇಕ್ಕಟ್ಟಾದ ಸ್ಥಳದಲ್ಲೇ ಪಾತ್ರೆ, ಇತರ ಪರಿಕರಗಳನ್ನು ಇರಿಸಲಾಗಿದೆ. ಅಡುಗೆ ಸಿಬ್ಬಂದಿ ಇಲ್ಲಿಯೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮಳೆ ಬಂದ ವೇಳೆ ಕೆಲವು ಶಾಲೆಗಳಲ್ಲಿ ಅಡುಗೆ ತಯಾರಿಸಲು ತೊಡಕಾಗುತ್ತದೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಪಾಲಕರಲ್ಲಿ ಮನೆ ಮಾಡಿದೆ.

ಹೆದರುವ ಶಿಕ್ಷಕರು: ಶಾಲೆಗಳಲ್ಲಿ ಅಡುಗೆ ಕೋಣೆಯ ಕೊರತೆ ಇದ್ದು, ಸಮಸ್ಯೆ ನಡುವೆಯೇ ಅಡುಗೆ ತಯಾರಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನದಲ್ಲಿದೆ. ಅಡುಗೆ ಕೋಣೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಒತ್ತಡ ಹೇರುವಲ್ಲಿ ಶಿಕ್ಷಕರು ಹೆದುರುತ್ತಿದ್ದಾರೆ. ಸೇವೆಗೆ ಎಲ್ಲಿ ತೊಡುಕಾಗುತ್ತದೆಯೋ ಎಂಬ ಭಯದಿಂದ ದಿನ ದೂಡುತ್ತಿದ್ದಾರೆ.

ಪಿಡಿಒಗಳ ಗಮನಕ್ಕೆ ಬಂದಿದೆ:

ನರೇಗಾ ಯೋಜನೆಯಡಿ ಶೌಚಗೃಹ, ಶಾಲಾ ಸುತ್ತುಗೋಡೆ, ಕುಡಿಯುವ ನೀರು, ಅಡುಗೆ ಕೋಣೆ ನಿರ್ಮಾಣ ಸೇರಿದಂತೆ ಇನ್ನಿತರೆ ಅಗತ್ಯ ಸೌಕರ್ಯವನ್ನು ಒದಗಿಸಲು ಅವಕಾಶವಿದೆ. ಇದರಲ್ಲಿ ಕೆಲವು ಶಾಲೆಗಳಲ್ಲಿ ಅಡುಗೆ ಕೋಣೆ ನಿರ್ಮಿಸಲಾಗಿದೆ. ಆದರೆ ಕೆಲವು ಶಾಲೆಗಳಲ್ಲಿ ನಿರ್ಮಿಸಿಲ್ಲ. ತಾಲೂಕಿನ ಶಾಲೆಗಳಲ್ಲಿ ಅಡುಗೆ ಕೋಣೆ ಕೊರತೆ ಇರುವುದು ಆಯಾ ಪಿಡಿಒಗಳ ಗಮನಲ್ಲಿದೆ. ಎಸ್‌ಡಿಎಂಸಿ ಸಮಿತಿ ಹಾಗೂ ಶಿಕ್ಷಕರು ಅಡುಗೆ ಕೋಣೆ ನಿರ್ಮಿಸುವಂತೆ ಗ್ರಾಪಂ ಹಾಗೂ ತಾಪಂಗೆ ಮನವಿ ಮಾಡಿದ್ದಾರೆ. ಆದರೆ ಪಿಡಿಒಗಳ ಇಚ್ಛಾಶಕ್ತಿಯ ಕೊರತೆ ಪರಿಣಾಮ ಅಡುಗೆ ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಉಪ ಕಾರ್ಯದರ್ಶಿ ಸೂಚನೆ

ಇತ್ತೀಚೆಗೆ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಂಗಸ್ವಾಮಿ ಅವರು ತಾಲೂಕಿನ 22 ಶಾಲೆಗಳಲ್ಲಿ ಅಡುಗೆ ಕೊರತೆ ಇರುವುದು ಗಮನಕ್ಕೆ ತಂದರು. ಈ ವೇಳೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯೂ ಆದ ತಾಪಂ ಆಡಳಿತಾಧಿಕಾರಿ ಶ್ರುತಿ ಅವರು ನರೇಗಾ ಯೋಜನೆಯಡಿ ಅಡುಗೆ ಕೋಣೆ ನಿರ್ಮಿಸಲು ಅವಕಾಶವಿದೆ. ಅಂತಹದ್ದರಲ್ಲಿ ಅಡುಗೆ ಮನೆ ನಿರ್ಮಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ?. ಆದ್ದರಿಂದ ಕೊರತೆ ಇರುವ ಶಾಲೆಗಳಲ್ಲಿ ಅಡುಗೆ ಕೋಣೆ ನಿರ್ಮಿಸುವ ಸಂಬಂಧ ಕ್ರಿಯಾ ಯೋಜನೆ ತಯಾರಿಸಿ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಪಿಡಿಒಗಳಿಗೆ ಸೂಚನೆ ನೀಡಿದ್ದಾರೆ. ಜತೆಗೆ ತಾಪಂ ಅನುದಾನಲ್ಲೂ ಅಡುಗೆ ಕೋಣೆ ನಿರ್ಮಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಅವರಿಗೂ ಸೂಚಿಸಿದ್ದಾರೆ.