ಯಳಂದೂರು ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಶನಿವಾರ ಕೃಷಿ ಯಾಂತ್ರೀಕರಣ ಯೋಜನೆಯಡಿ ಪಲಾನುಭವಿಗಳಿಗೆ ಪವರ್ ಟಿಲ್ಲರ್ ನ್ನು ಶಾಸಕ ಎನ್.ಮಹೇಶ್ ವಿತರಿಸಿದರು. ಸಹಾಯಕ ನಿರ್ದೇಶಕ ಅಮೃತೇಶ್, ವೆಂಕಟರಂಗಶೆಟ್ಟಿ ಸೇರಿದಂತೆ ಇತರರು ಹಾಜರಿದ್ದರು. 
ಜಿಲ್ಲೆ

22 ರೈತರಿಗೆ ಪವರ್ ಟಿಲ್ಲರ್ ವಿತರಣೆ : ಶಾಸಕ ಎನ್.ಮಹೇಶ್

ಯಳಂದೂರು: ಕೃಷಿ ಯಾಂತ್ರೀಕರಣ ಯೋಜನೆಯಡಿ ರಿಯಾಯಿತಿ ದರದಲ್ಲಿ 22 ಫಲಾನುಭವಿಗಳಿಗೆ ಪವರ್ ಟಿಲ್ಲರ್‌ನ್ನು ನೀಡಲಾಗಿದ್ದು, ಇದನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಕೊಂಡು ಸದುಪಯೋಗಪಡಿಸಿಕೊಳ್ಳಬೇಕು, ಯಾವುದೇ ಕಾರಣ ಯಂತ್ರವನ್ನು ಮಾರಟ ಮಾಡಿಕೊಳ್ಳಬೇಡಿ ಎಂದು ಶಾಸಕ ಎನ್.ಮಹೇಶ್ ರೈತರಿಗೆ ಕಿವಿ ಮಾತು ಹೇಳಿದರು.

ಅವರು ಪಟ್ಟಣದ ಕೃಷಿ ಸಹಾಯಕ ಇಲಾಖೆ ಕಚೇರಿ ಮುಂಭಾಗ ಶನಿವಾರ 2022-23 ನೇ ಸಾಲಿನ ಪವರ್ ಟಿಲ್ಲರ್ ವಿತರಣೆ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿ, ಸರ್ಕಾರವು ರೈತರಿಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಭಿತ್ತನೆ ಬೀಜ, ಬೀಜೋಪಚಾರ, ರಸಗೊಬ್ಬರ, ಕೃಷಿ ಬೆಳೆಗೆ ಬೇಕಿರುವ ಔಷಧಿ, ಆಧುನಿಕ ತಾಂತ್ರಿಕತೆ, ಭತ್ತ ನಾಟಿ ಯಂತ್ರ, ಕಳೆ ನಾಶಕ ಯಂತ್ರ, ಪೈಪ್‌ಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳನ್ನು ಪಡೆದುಕೊಂಡು ಕೃಷಿ ಚಟುವಟಕೆಯಲ್ಲಿ ಅಭಿವೃದ್ಧಿ ಸಾಧಿಸುವಂತಾಗಬೇಕೆಂದು, ಇತ್ತೀಚಿನ ದಿನಗಳಲ್ಲಿ ಜಮೀನುಗಳಲ್ಲಿ ಕೆಲಸ ಮಾಡುವವರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ ಆದರಿಂದ ಕೃಷಿಗೆ ಮೊದಲ ಆದ್ಯತೆ ನೀಡಬೇಕೆಂದು ಕರೆ ನೀಡಿದರು.

ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ ತಾಲೂಕಿನಲ್ಲಿ 2022-23 ನೇ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ 20 ಸಾಮಾನ್ಯ, 1 ವಿಶೇಷ ಘಟಕ ಯೋಜನೆ, 2 ಗಿರಿಜನ ಉಪ ಯೋಜನೆ ಫಲಾನುಭವಿಗಳಿಗೆ ಟಿಲ್ಲರ್ ವಿತರಿಸಲಾಗಿದ್ದು, ಸಾಮಾನ್ಯ ವರ್ಗದ ರೈತರಿಗೆ 122000 , ಸಹಾಯಧನ 82500. ಪರಿಶಿಷ್ಟ ಜಾತಿ ಪಂಗಡ 104500, ಸಹಾಯಧನ 1 ಲಕ್ಷ ರೂ, ನೀಡಲಾಗುತ್ತಿದೆ, ಪ್ರಸುತ್ತ ಸಾಲಿನಲ್ಲಿ 32 ಪವರ್ ಟಿಲ್ಲರ್ ನೀಡಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ಅಮೃತೇಶ್, ಕೃಷಿ ಇಲಾಖೆ ಅಧೀಕ್ಷಕ ಶ್ರೀನಿವಾಸ್, ರ್ರಯತ ಸಂಪರ್ಕ ಕೇಂದ್ರದ ಪ್ರಭು, ಪ.ಪಂ.ನಾಮನಿರ್ದೇಶನ ಸದಸ್ಯ ಮಹೇಶ್, ಕಾರಪುರ ವಿರಕ್ತ ಮಠದ ಬಸವರಾಜಸ್ವಾಮಿ, ಮುಖಂಡ ಅಂಬಳೆ ಮಹದೇವ್, ಶಾಸಕರ ಆಪ್ತ ಕಾರ್ದರ್ಶಿ ಮಹದೇವಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.