ಹರಿಹರ: ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡುಕೊಂಡ ಕಳ್ಳರು ಬರೋಬ್ಬರಿ 22 ಲಕ್ಷ ರೂ. ಮೌಲ್ಯದ ನಗ, ನಗದು ಕಳ್ಳತನ ಮಾಡಿದ್ದಾರೆ.
ಜೆ.ಸಿ. ಬಡಾವಣೆ 5ನೇ ಮೇನ್, 1ನೇ ಕ್ರಾಸ್‌ನ ಡಾ.ಸಚಿನ್ ಬೊಂಗಾಳೆ ಎಂಬುವವರ ಮನೆಯಲ್ಲಿ ಆ.11ರಿಂದ ಆ.13ರೊಳಗೆ ಕಳ್ಳತನ ನಡೆದಿದೆ.
ಬಂಧಿಯೊಬ್ಬರ ಕಾರ್ಯಕ್ರಮದಲ್ಲಿ ಭಾಗವಹಿಸಲು ವೈದ್ಯರು ತಮ್ಮ ಕುಟುಂಬದ ಸದಸ್ಯರೊಂದಿಗೆ ಆ.11ರಂದು ಬೆಳಗಾವಿಗೆ ಹೋಗಿದ್ದರು. ಆ.13ರಂದು ರಾತ್ರಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
434 ಗ್ರಾಂ ಬಂಗಾರದ ಒಡವೆಗಳು, 500 ಗ್ರಾಂ ಬೆಳ್ಳಿ ಗಟ್ಟಿ ಹಾಗೂ ರೂ.25 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ ಎಂದು ನಗರ ಠಾಣೆಯಲ್ಲಿ ಆ.14ರಂದು ದೂರು ದಾಖಲಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನ ದಳ ಮತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.