ಜಿಲ್ಲೆ

ಬಸ್‌ಗೆ ಟಿಪ್ಪರ್ ಡಿಕ್ಕಿಯಾಗಿ 22 ಜನಕ್ಕೆ ಗಾಯ

ವೀರೇಶ ಸೌದ್ರಿ

ಸಿದ್ದಾಪುರ: ತಾಲೂಕಿನ ಮಾವಿನಗುಂಡಿ ಸಮೀಪ ಟಿಪ್ಪರ್ ಹಾಗೂ ಸಾರಿಗೆ ಬಸ್ ಡಿಕ್ಕಿಯಾಗಿ ಬಸ್‌ನಲ್ಲಿದ್ದ 21 ಪ್ರಯಾಣಿಕರು ಹಾಗೂ ಟಿಪ್ಪರ್ ಚಾಲಕ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.

ಭಟ್ಕಳದಿಂದ ಹಿರೇಕೆರೂರಿಗೆ ತೆರಳುತ್ತಿದ್ದ ಬಸ್‌ಗೆ ಎದುರುಗಡೆಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಿಳಿಸಿದ್ದಾರೆ.