ಮೈಸೂರು: ವೆಟರ್ನ್ಸ್ ಫೆಡರೇಷನ್ ಆಪ್ ಇಂಡಿಯಾ ವತಿಯಿಂದ 44ನೇ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟವನ್ನು ಏ.21, 22, 23ರಂದು ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ
ರಾಷ್ಟ್ರದ ಮಟ್ಟದ ಹಿರಿಯ ಕ್ರೀಡಾಪಟುಗಳು, 30 ವರ್ಷ ಮೇಲ್ಪಟ್ಟ ತಮಿಳುನಾಡು, ಕೇರಳ, ಪಂಜಾಬ್, ಚಂಡೀಗಡ್, ಹರಿಯಾಣ, ರಾಜಸ್ತಾನ್, ಕರ್ನಾಟಕ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್‌ಗಡ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಿಂದ 1520 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ರಂಗನಾಥ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು, ಅರ್ಜುನ್ ಪ್ರಶಸ್ತಿ, ದ್ರೋಣ ಪ್ರಶಸ್ತಿ, ಪದ್ಮ ಪ್ರಶಸ್ತಿ ಪಡೆದವರು, ಸೇನೆ, ರೈಲ್ವೆ ಹಾಗೂ ಬೃಹತ್ ಕೈಗಾರಿಕೆಗಳಲ್ಲಿರುವ ಉದ್ಯೋಗಿಗಳು ಸಹ ಇವರಲ್ಲಿ ಸೇರಿದ್ದಾರೆ. ಇದೇ ವೇಳೆ 75 ವರ್ಷದ ಮೀರಿದ ಉತ್ತಮ ಕ್ರೀಡಾಪಟುಗಳಿಗೆ ಭೀಷ್ಮ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು. ಸಂಸ್ಥೆಯ ಪದಾಧಿಕಾರಿಗಳಾದ ಜಿ.ರಾಮಮೂರ್ತಿ, ವೇಣುಗೋಪಾಲ್, ಪ್ರವೀಣ್ ನಾಯಕ್, ಎಂ.ಎನ್.ನಾಗೇಶ್, ಆರ್.ಪ್ರದೀಪ್ ಕುಮಾರ್ ಇತರರಿದ್ದರು.