ಕಲಬುರಗಿ: ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮೊದಲಾದ ರೈತರ ಮತ್ತು ಜನವಿರೋಧಿ ಮಸೂದೆಗಳನ್ನು ತಕ್ಷಣವೇ ಕೈಬಿಡಬೇಕು. ಅವುಗಳನ್ನು ಅಧಿವೇಶನದಲ್ಲಿ ಮಂಡಿಸಬಾರದು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ರೈತ ಕಾರ್ಮಿಕ ಮಸೂದೆಗಳನ್ನು ಸೋಲಿಸಿ ಎಂಬ ಘೊಷಣೆಯೊಂದಿಗೆ 21ರಿಂದ ಬೆಂಗಳೂರಿನಲ್ಲಿ ಅಖಲ ಭಾರತ ರೈತ ಸಂಘರ್ಷ ಸಮನ್ವಯ ಸಮತಿ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸುವುದಾಗಿ ಹಿರಿಯ ರೈತ ಮುಖಂಡ ಮಾರುತಿ ಮಾನ್ಪಡೆ ತಿಳಿಸಿದರು.
ಅನ್ನದಾತರನ್ನು ಭಿಕ್ಷುಕರನ್ನಾಗಿ ಮಾಡುವ ಹುನ್ನಾರದಿಂದ ಸರ್ಕಾರ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮಸೂದೆಗಳನ್ನು ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ, ಈ ಕೂಡಲೇ ಸಕರ್ಾರ ತನ್ನ ನಿಲುವು ಬದಲಿಸಬೇಕು ಎಂದು ಆಗ್ರಹಿಸಿದರು.
21ರಿಂದ ವಿಧಾನ ಮಂಡಲ ಅಧಿವೇಶನ ಅಧಿವೇಶನ ಮುಗಿಯವವರೆಗೂ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಧರಣಿ ನಡೆಸಲಾಗುವುದು. ಒಂದು ವೇಳೆ ಸಕರ್ಾರ ಮಸೂದೆ ಮಂಡಿಸಲು ಮುಂದಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಐಕೆಎಸ್ ರಾಷ್ಟ್ರೀಯ ಅಧ್ಯಕ್ಷ ಡಾ.ಅಶೋಕ ಡಾವಲೆ, ಸ್ವರಾಜ್ಯ ಅಭಿಯಾನ ನಾಯಕ ಯೋಗೇಂದ್ರ ಯಾದವ್, ಕುರಬೂರು ಶಾಂತಕುಮಾರ, ಕೋಡಿಹಳ್ಳಿ ಚಂದ್ರಶೇಖರ ಮೊದಲಾದವರು ಪಾಲ್ಗೊಳ್ಳುವರು ಎಂದು ಮಾನ್ಪಡೆ ತಿಳಿಸಿದರು.