ಜಿಲ್ಲೆ

21ರಂದು ರಂಗಕಲೆ ಕುರಿತು ತರಬೇತಿ ಕಾರ‌್ಯಾಗಾರ

ಚಿತ್ರದುರ್ಗ:ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಶ್ರೀ ರಾಘವೇಂದ್ರ ಶಿಕ್ಷಣ ಮ ಹಾವಿದ್ಯಾಲಯದಲ್ಲಿ ಜು.21ರಂದು ಬೆಳಗ್ಗೆ 10.30ಕ್ಕೆ ‘ಶಿಕ್ಷಣದಲ್ಲಿ ರಂಗಕಲೆ’ವಿಷಯದ ಕುರಿತ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸ ಲಾಗಿದೆ.

ಪ್ರಾಚಾರ‌್ಯ ಡಾ.ಎ.ಜಿ.ಬಸವರಾಜಪ್ಪ ಕಾರ‌್ಯಕ್ರಮ ಉದ್ಘಾಟಿಸುವರು. ಉಪಪ್ರಾಚಾರ‌್ಯ ಡಾ.ಕೆ. ಮೋಹನ್‌ಕುಮಾರ್ ಅಧ್ಯಕ್ಷತೆ ವಹಿ ಸುವರು.

ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಿರ್ದೇಶನದಲ್ಲಿ ಶಿಕ್ಷಣದಲ್ಲಿ ರಂಗಕಲೆಗೆ ಸಂಬಂಧಿಸಿದ ಪ್ರಾಯೋಗಿಕ ರಂಗಭೂಮಿ ತರಬೇತಿ ಪ ಡೆದ ದ್ವಿತೀಯ ಬಿಇಡಿ ಪ್ರಶಿಕ್ಷಣಾರ್ಥಿಗಳು ಶೈಕ್ಷಣಿಕ ಪಠ್ಯಕ್ರಮಕ್ಕೆ ಅನುಗುಣವಾಗಿ ರೂಪಕ ಪ್ರದರ್ಶನಗಳನ್ನು ನೀಡಲಿದ್ದಾರೆಂದು ಸಂ ಘದ ನಿರ್ದೇಶಕ ಕೆ.ದಯಾನಂದಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.