ಜಿಲ್ಲೆ

21ರಂದು ಕಥಾಲೇಖನ ಸಿನಿಮಾ ಬಿಡುಗಡೆ

ಮೈಸೂರು: ರಿವೆಂಜ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ‘ಕಥಾಲೇಖನ’ ಚಲನಚಿತ್ರವು ಅ.21ರಂದು ಬಿಡುಗಡೆಯಾಗಲಿದೆ.


ನಗರಕ್ಕೆ ಆಗಮಿಸಿದ ಚಿತ್ರತಂಡವು ಸಿನಿಮಾದ ಟ್ರೈಲರ್ ಹಾಗೂ ಹಾಡುಗಳನ್ನು ಪ್ರದರ್ಶಿಸಿ ಸಿನಿಮಾದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿತು.
ಜೆ.ಕೆ.ಎಂಟರ್ಟೈಮೆಂಟ್ ಬ್ಯಾನರ್‌ನಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಎನ್‌ಆರ್‌ಐ ನಿರ್ಮಾಪಕರಾದ ಇಂಡಿಯಾ ಟೂ ಇಂಗ್ಲೆಂಡ್ ಖ್ಯಾತಿಯ ಗೋಪಾಲ್ ಕುಲಕರ್ಣಿ ನಿರ್ಮಿಸಿದ್ದು, ಸತ್ಯರತ್ನಮ್ ನಿರ್ದೇಶನ ಮಾಡಿದ್ದಾರೆ.


ಈ ಚಿತ್ರವು ಅ.21ರಂದು ರಾಜ್ಯಾದ್ಯಂತ ಮತ್ತು ವಿಶ್ವದ ಹಲವು ಕಡೆ ತೆರೆ ಕಾಣಲಿದೆ. ಪ್ರೇಮಕಥೆಯೊಂದಿಗೆ ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿಯನ್ನೂ ಒಳಗೊಂಡಿದೆ. ನಟ ಅರ್ಫತ್, ನಟಿ ಕಾವ್ಯ ಭಗವಂತ್, ಮುಖ್ಯ ತಾರಾಗಣದಲ್ಲಿ ನಾನು ಸೇರಿದಂತೆ ಹಾಸ್ಯ ಕಲಾವಿದ ಚಂದ್ರಪ್ರಭ, ನಾಗೇಂದ್ರ ಅರಸ್, ಸ್ವಪ್ನ ರಾಜ್, ಪಲ್ಟಿ ಗೋವಿಂದ, ಜಗಪ್ಪ, ಮಂಜು ಪಾವಗಡ ಮುಖ್ಯ ಭೂಮಿಕೆಯಲ್ಲಿದ್ದು, ಇನ್ನೂ ಹಲವು ಹೊಸ ಪ್ರತಿಭೆಗಳು ಕೂಡ ನಟಿಸಿದ್ದಾರೆ. ಚಿತ್ರಕ್ಕೆ ಕರ್ಣಂ ಶ್ರೀರಾಘವೇಂದ್ರ ಅವರ ಸಂಗೀತ, ಎಸ್.ರಂಗಸ್ವಾಮಿ ಛಾಯಾಗ್ರಹಣ, ಶ್ರೀವರ್ಕಲರ ಸಂಕಲನ, ರಾಜು ಅವರ ನೃತ್ಯ ಸಂಯೋಜನೆಯಲ್ಲಿ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದು ನಟ ಗೋಪಾಲ್ ಕುಲಕರ್ಣಿ ಮಾಹಿತಿ ನೀಡಿದರು.


ಸತ್ಯರತ್ನಮ್ ಹಾಗೂ ಹರ್ಷವರ್ಧನ್ ನಿಟ್ಟೂರು ಚಿತ್ರ ಸಾಹಿತ್ಯ ಬರೆದಿದ್ದರೆ, ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್‌ಪ್ರಕಾಶ್, ಗೌತಮ್ ಭಾರದ್ವಾಜ್, ಅನುರಾಧಾ ಭಟ್ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ ಎಂದರು.