ಜಿಲ್ಲೆ

ಶ್ರೀರಂಗಪಟ್ಟಣ, ಮಂಡ್ಯ ಹಾಗೂ ಮದ್ದೂರು ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗೆ ಜು.21ರಂದು ನೇಮಕಾತಿ ಸಂದರ್ಶನ

ಮಂಡ್ಯ: ಮೆ.ನಿವರಾ ಹೋಂ ಫೈನಾನ್ಸ್‌ನಿಂದ ಶ್ರೀರಂಗಪಟ್ಟಣ, ಮಂಡ್ಯ ಹಾಗೂ ಮದ್ದೂರು ತಾಲೂಕಿನಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಹುದ್ದೆಗೆ ಜು.21ರಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಎಸ್‌ಎಸ್‌ಎಲ್‌ಸಿ(ಉತ್ತೀರ್ಣ ಹಾಗೂ ಅನುತ್ತೀರ್ಣ) ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ 18 ರಿಂದ 35 ವರ್ಷದೊಳಗಿನವರು ಹಾಜರಾಗಬಹುದು. ಪ್ರಮುಖವಾಗಿ ದ್ವಿಚಕ್ರ ವಾಹನ ಹೊಂದಿರಬೇಕು. ಅರ್ಹರು 2 ಭಾವಚಿತ್ರ, ಸ್ವವಿವರದ ಪ್ರತಿ, ವಿದ್ಯಾರ್ಹತೆ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅಂದು ಬೆಳಗ್ಗೆ 10ಗಂಟೆಗೆ ಹಾಜರಾಗಬಹುದು. ಮಾಹಿತಿಗೆ ದೂ.ಸಂ 08232-295124 ಮತ್ತು ಮೊ.ಸಂ 8217803781 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಎನ್.ಆರ್. ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.