ಕಾಸರಗೋಡು: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಾಕ್ಷರತಾ ಮಿಷನ್ ನಡೆಸುವ 10ನೇ ತರಗತಿಯ ಸಮತ್ವ ಪರೀಕ್ಷೆ ಜಿಲ್ಲೆಯ 10 ಪ್ರೌಢಶಾಲೆಗಳಲ್ಲಿ ಅಕ್ಟೋಬರ್ 21ರಿಂದ 30ರವರೆಗೆ ನಡೆಯಲಿದೆ. 144 ಪುರುಷರು ಮತ್ತು 455 ಮಂದಿ ಮಹಿಳೆಯರ ಸಹಿತ 599 ಹಿರಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಎಸ್‌ಟಿ 48, ಎಸ್‌ಸಿ 33, ವಿಕಲಚೇತನರು 6, ಒಬಿಸಿ 437, ಕನ್ನಡ 177, ಮಲಯಾಲಂ ವಿಭಾಗದಲ್ಲಿ 422ಮಂದಿ ಒಳಗೊಂಡಿದ್ದಾರೆ. ಎಲ್ಲ ರಜಾ ದಿನಗಳಲ್ಲಿ ಸಂಪರ್ಕ ತರಗತಿಗಳನ್ನು ನಡೆಸುವ ಮೂಲಕ ಸಾಕ್ಷರತಾ ಮಿಷನ್ ವತಿಯಿಂದ ತರಗತಿ ನಡೆಸಲಾಗುತ್ತಿದೆ. ಕುತ್ತಿಕ್ಕೋಲ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ 72 ವರ್ಷದ ಕರಿವೇದಕಂ ಪಯ್ಯನಾಡ್ ಪಿ.ಜೆ.ಆಂಟನಿ ಹಿರಿಯ ಹಾಗೂ ಮುಳಿಯಾರ್ ಬಿಎಆರ್‌ಎಚ್‌ಎಸ್‌ಎಸ್ ಬೋವಿಕ್ಕಾನದಲ್ಲಿ ಪರೀಕ್ಷೆಗೆ ಹಾಜರಾಗುವ 18 ವರ್ಷದ ಸೊಯಬ್‌ಮಲಿಕ್ ಅತ್ಯಂತ ಕಿರಿಯ ವಿದ್ಯಾರ್ಥಿಯಾಗಿದ್ದಾರೆ.
ಜಿಎಚ್‌ಎಸ್‌ಎಸ್ ಹೊಸದುರ್ಗ (93) ಜಿಎಚ್‌ಎಸ್‌ಎಸ್ ಕಾಸರಗೋಡು (79) ಎಸ್‌ಎಟಿ ಮಂಜೇಶ್ವರ (70) ಜಿಎಚ್‌ಎಸ್‌ಎಸ್ ತ್ರಿಕರಿಪುರ (53)ಜಿಎಚ್‌ಎಸ್ ಕುಂಬಳೆ (57) ಬಿಎಆರ್‌ಎಚ್‌ಎಸ್‌ಎಸ್ ಬೋವಿಕ್ಕಾನ (44) ಜಿಎಚ್‌ಎಸ್‌ಎಸ್ ಪರಪ್ಪ (51) ಜಿಎಚ್‌ಎಸ್‌ಎಸ್ ಮುಳ್ಳೇರಿಯ (50) ಜಿಎಚ್‌ಎಸ್‌ಎಸ್ ಕುಟ್ಟಿಕೋಲ್(48) ಬಿಇಎಂಎಚ್‌ಎಸ್‌ಎಸ್ ಕಾಸರಗೋಡು (44) ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.