ಜಿಲ್ಲೆ

ಹಾವೇರಿ ಜಿಲ್ಲೆಯಲ್ಲಿ 214 ಜನರಿಗೆ ಕರೊನಾ ಪಾಸಿಟಿವ್, 12 ಮಂದಿ ಸಾವು

ಹಾವೇರಿ: ಜಿಲ್ಲೆಯಲ್ಲಿ ಸೋಮವಾರ 214 ಜನರಿಗೆ ಕರೊನಾ ಪಾಸಿಟಿವ್ ಬಂದಿದೆ. 245 ಜನ ಗುಣವಾಗಿ ಬಿಡುಗಡೆಗೊಂಡಿದ್ದಾರೆ. 12 ಜನರು ಮೃತಪಟ್ಟಿದ್ದಾರೆ ಎಂದು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ. ರಾಣೆಬೆನ್ನೂರ ತಾಲೂಕಿನಲ್ಲಿ ಅತಿಹೆಚ್ಚು 48, ಹಾನಗಲ್ಲ 46, ಶಿಗ್ಗಾಂವಿ 37, ಬ್ಯಾಡಗಿ 22, ಹಾವೇರಿ ಹಾಗೂ ಹಿರೇಕೆರೂರ ತಾಲೂಕಿನಲ್ಲಿ ತಲಾ 18, ಸವಣೂರ ತಾಲೂಕಿನಲ್ಲಿ 17 ಹಾಗೂ ಇತರೆ 8 ಜನರಿಗೆ ಸೋಮವಾರ ಪಾಸಿಟಿವ್ ವರದಿಯಾಗಿದೆ. ಇದರಲ್ಲಿ ಇಬ್ಬರು ಆರೋಗ್ಯ ಇಲಾಖೆಯ ಕರೊನಾ ಸೇನಾನಿಗಳಿದ್ದಾರೆ. ರಾಣೆಬೆನ್ನೂರ ತಾಲೂಕಿನಲ್ಲಿ 121, ಹಾವೇರಿ 44, ಶಿಗ್ಗಾಂವಿ 26, ಹಾನಗಲ್ಲ 25, ಬ್ಯಾಡಗಿ 18, ಸವಣೂರ 5, ಹಿರೇಕೆರೂರ ತಾಲೂಕಿನಲ್ಲಿ 3 ಹಾಗೂ ಇತರೆ 3 ಜನರು ಸೇರಿ ಒಟ್ಟು 245 ಜನರು ಗುಣವಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 14,988 ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 13,239 ಜನ ಗುಣವಾಗಿದ್ದಾರೆ. ಇದುವರೆಗೆ 285 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಸದ್ಯ 1,464 ಸಕ್ರಿಯ ಪ್ರಕರಣಗಳಿದ್ದು, 675 ಜನರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. 789 ಜನರು ಹೋಮ್ ಐಸೋಲೇಷನ್​ನಲ್ಲಿದ್ದಾರೆ.
12 ಜನರ ಸಾವು: ಹಾವೇರಿ ತಾಲೂಕಿನ 70 ವರ್ಷದ ವೃದ್ಧ, 56 ವರ್ಷದ ಮಹಿಳೆ, 65 ವರ್ಷದ ವೃದ್ಧೆ, 58 ವರ್ಷದ ಪುರುಷ ಸೇರಿ ನಾಲ್ವರು, ಶಿಗ್ಗಾಂವಿ ತಾಲೂಕಿನ 55 ವರ್ಷದ ಮಹಿಳೆ, 65 ವರ್ಷದ ವೃದ್ಧ, 43 ಹಾಗೂ 45 ವರ್ಷದ ಇಬ್ಬರು ಪುರುಷರು ಸೇರಿ ನಾಲ್ವರು, ಬ್ಯಾಡಗಿ ತಾಲೂಕಿನ 55 ವರ್ಷದ ಮಹಿಳೆ, 68 ಹಾಗೂ 61 ವರ್ಷದ ಇಬ್ಬರು ವೃದ್ಧರು ಸೇರಿ ಮೂವರು, ಹಾನಗಲ್ಲ ತಾಲೂಕಿನ 68 ವರ್ಷದ ವೃದ್ಧ ಸೇರಿ ಒಟ್ಟು 12 ಜನರು ಸೋಮವಾರ ಕೋವಿಡ್​ನಿಂದ ಮೃತಪಟ್ಟಿದ್ದಾರೆ.