ಇಂಡಿ: ಲೋಕ ಅದಾಲತ್ನಲ್ಲಿ ಬ್ಯಾಂಕಿನ ಸಾಲ ಪ್ರಕರಣಗಳು ಸೇರಿ ಒಟ್ಟು ಒಂದು ಕೋಟಿ ರೂ. ವಸೂಲಾತಿಯಾಗಿದೆ. 2122 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ& ದಿವಾಣಿ ನ್ಯಾಯಾಧೀಶರಾದ ಈಶ್ವರ ಎಸ್.ಎಂ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಂತರ ಅವರು ಮಾತನಾಡಿದರು.
ಕಳೆದ ಬಾರಿ ನಡೆದ ಲೋಕ ಅದಾಲತ್ನಲ್ಲಿ 2486 ಪ್ರಕರಣಗಳು ಇತ್ಯರ್ಥಗೊಂಡಿದ್ದವು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಶಾಂತತೆ ಭಂಗ ಉಂಟು ಮಾಡಿರುವುದು, ಅಪಘಾತ ಪ್ರಕರಣ, ಸಿವಿಲ್ ಪಾಲು ವಾಟ್ನಿ ದಾವೆ, ರ್ನಿಬಂಧಕಾಜ್ಞೆ ದಾವೆ, ವಾಹನ ಅಪಘಾತ ಪರಿಹಾರದಂತಹ ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.
ವಿಜಯಪುರದ 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಎಲ್.ಡಿ.ಹವಳೆ, ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಚ್.ಆರ್.ದೇವರಾಜು, ವಕೀಲರ ಸಂದ ಅಧ್ಯ ಪಿ.ಬಿ.ಪಾಟೀಲ, ಕಾರ್ಯದರ್ಶಿ ಎಸ್.ಆರ್.ಬಿರಾದಾರ, ನ್ಯಾಯವಾದಿಗಳಾದ ಎಸ್.ಎಲ್.ನಿಂಬರಗಿಮಠ, ಬಿ.ಬಿ.ಕೊಟ್ಟಲಗಿ, ಎಂ.ಸಿ.ಬಿರಾದಾರ, ಎಸ್.ಐ.ಬಿರಾದಾರ, ಎಸ್.ಬಿ.ಬೂದಿಹಾಳ, ಸೋಮು ನಿಂಬರಗಿಮಠ, ಪ್ರವಿಣ ಕಾಂಬಳೆ, ವೀರೇಂದ್ರ ಪಾಟೀಲ, ಪ್ರಕಾಶ ಲವಗಿ, ಬಿ.ಕೆ.ಮಸಳಿ, ಎಂ.ಎಸ್.ಬಿರಾದಾರ, ಸುನೀಲ ಕುಲಕರ್ಣಿ, ಬಿ.ಬಿ.ಬಿರಾದಾರ, ಶ್ರೇಣಿಕರಾಜ ಪಾಟೀಲ, ಡಿ.ಎಸ್.ಮಡಿವಾಳರ, ಬಿ.ಸಿ.ತಾಂಬೆ, ಎಸ್.ಜಿ.ಹತ್ತರಕಿ, ಕೆ.ಪಿ.ಭೈರಜಿ, ಎಸ್.ಎಸ್.ರೆಬಿನಾಳ, ಎಸ್.ಎಲ್.ಬಟಗಿ, ಸಿದ್ದು ಹಾವಳಗಿ ಇತರರಿದ್ದರು.