ಜಿಲ್ಲೆ

ಉಡುಪಿಯಲ್ಲಿ 210 ಮಂದಿಗೆ ಕರೊನಾ ಸೋಂಕು

Udupi

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 210 ಮಂದಿಗೆ ಕರೊನಾ ಸೋಂಕು ದೃಢವಾಗಿದೆ.

ಇದನ್ನು ಸ್ವತಃ ಸಚಿವ ಆರ್.ಅಶೋಕ್ ಬಹಿರಂಗಪಡಿಸಿದ್ದಾರೆ. ಕೋವಿಡ್-19 ಹೆಲ್ತ್ ಬುಲೆಟಿನ್ ಸಾಯಂಕಾಲ ಬಿಡುಗಡೆಯಾಗಬೇಕಿದ್ದು, ಇದಕ್ಕೂ ಮೊದಲೇ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವರು ಈ ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 470ಕ್ಕೆ ಏರಿಕೆಯಾಗಿದೆ. ಸೋಮವಾರ 73 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.

ಮಾರ್ಚ್ 29ರದಿಂದ ಮೇ 14ರವರೆಗೆ ಕೇವಲ 3 ಪ್ರಕರಣಗಳಷ್ಟೇ ಇದ್ದ ಉಡುಪಿಯಲ್ಲಿ ಮೇ 15ರಂದು ಕರೊನಾ ಸೋಂಕು ಹೆಚ್ಚಳ ಆರಂಭವಾಗಿತ್ತು. ಇದು ಈಗ 470 ಮುಟ್ಟಿದೆ. ಇನ್ನೂ ಸುಮಾರು 5,500 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ವರದಿ ಬರಬೇಕಿದೆ. ಅಲ್ಲದೆ, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ನಿಂದ ಹೋಂ ಕ್ವಾರಂಟೈನ್‌ಗೆ ವರ್ಗಾಯಿಸಿರುವುದರಿಂದ ಮನೆಯವರಿಗೂ ಸೋಂಕು ತಗುಲುವ ಆತಂಕವಿದೆ. ಇವೆಲ್ಲದರ ಕಾರಣದಿಂದಾಗಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ.