ಅನ್ಸಾರ್ ಇನೋಳಿ ಉಳ್ಳಾಲ
ರಸ್ತೆಯುದ್ದಕ್ಕೂ ತ್ಯಾಜ್ಯ ಎಸೆಯುವ ಕಿಡಿಗೇಡಿಗಳ ಒಂದು ವರ್ಗ, ಅವುಗಳಿಗೆ ಬೆಂಕಿ ಕೊಟ್ಟು ಮರೆಮಾಚಲು ಪ್ರಯತ್ನಿಸುವ ಕಿಡಿಗೇಡಿಗಳ ಇನ್ನೊಂದು ವರ್ಗ. ಇವೆರಡು ವರ್ಗಗಳ ನಡುವೆ ಕರಟುತ್ತಿವೆ ಗಿಡ-ಮರಗಳು... ಇಂಥ ದಯನೀಯ ಸ್ಥಿತಿ ಉಳ್ಳಾಲ ಭಾಗದ ಅಲ್ಲಲ್ಲಿ ಕಂಡುಬರುತ್ತಿದೆ.
ಉಳ್ಳಾಲ ತಾಲೂಕಿನ ಬಹುತೇಕ ಗ್ರಾ.ಪಂ.ಗಳು, ನಗರಸಭೆ, ಪ.ಪಂ., ಪುರಸಭಾ ವ್ಯಾಪ್ತಿಯಲ್ಲಿ ಕಸ ಸಂಗ್ರಹ ನಡೆಯುತ್ತಿದೆ. ಅಂಬ್ಲಮೊಗರು ಸಹಿತ ಬೆರಳೆಣಿಕೆಯ ಗ್ರಾಪಂಗಳಲ್ಲಿ ಮಾತ್ರ ಕಸ ಸಂಗ್ರಹ ವ್ಯವಸ್ಥೆಯೇ ಆಗಿಲ್ಲ. ಆದರೂ ಕಸ ಸಂಗ್ರಹ ಇರುವ ಗ್ರಾಮಗಳ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ಸಹಿತ ಇತರ ತ್ಯಾಜ್ಯಗಳ ಕಟ್ಟುಗಳು ರಾರಾಜಿಸುತ್ತಿವೆ. ಪ್ರಮುಖ ರಸ್ತೆಗಳ ಬಗ್ಗೆ ಕಾಳಜಿ ವಹಿಸುವ ಸ್ಥಳೀಯಾಡಳಿತಗಾರರು, ಅಧಿಕಾರಿ ವರ್ಗ ಒಳರಸ್ತೆಗಳ ಬಗ್ಗೆ ನಿರ್ಲಕ್ಷೃ ತೋರಿರುವುದರಿಂದ ಇಲ್ಲೆಲ್ಲಾ ಅಸಹ್ಯವಾದ ವಾತಾರಣ ಸೃಷ್ಟಿಯಾಗಿದೆ.
ಸ್ಥಳೀಯಾಡಳಿತ ಅಸಹಾಯಕ: ಆಡಳಿತಗಾರರು, ಅಧಿಕಾರಿ ವರ್ಗದ ಕಾರ್ಯವೈಖರಿಯ ಬಗ್ಗೆ ಪರಿಸರ ಪ್ರೇಮಿಗಳು ಛೀ, ಥೂ ಎನ್ನುವುದು ಸಾಮಾನ್ಯ ಎನಿಸಿದೆ. ಪತ್ರಿಕೆಗಳು, ಜಾಲತಾಣಗಳಲ್ಲೂ ವರದಿಗಳು ಪ್ರಕಟಗೊಳ್ಳುತ್ತಿವೆ. ರಸ್ತೆಬದಿ ರಾಶಿ ಬೀಳುವ ತ್ಯಾಜ್ಯಕ್ಕೆ ಕಡಿವಾಣ ಹಾಕುವ ವಿಚಾರದಲ್ಲಿ ಸ್ಥಳೀಯಾಡಳಿತಗಳು ಅಸಹಾಯಕವಾಗಿವೆ. ಇದರ ಭಾಗವಾಗಿ ಕೆಲವು ಕಡೆಗಳಲ್ಲಿ ತ್ಯಾಜ್ಯಕ್ಕೆ, ಇನ್ನು ಕೆಲವು ಕಡೆಗಳಲ್ಲಿ ಹುಲ್ಲಿಗೆ ಬೆಂಕಿ ಹಾಕಿ ಇನ್ನಿಲ್ಲದಂತೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ. ಈಗಿನ ಉರಿಬಿಸಿಲಿನಿಂದಾಗಿ ಬೆಂಕಿ ಪಸರಿಸುತ್ತಾ ಸನಿಹದಲ್ಲಿರುವ ಗಿಡ, ಮರಗಳನ್ನೇ ಆಹುತಿ ಪಡೆಯುತ್ತಿದೆ.
ಅಂಬ್ಲಮೊಗರು, ಬೆಳ್ಮ, ಕೊಣಾಜೆ, ಬಾಳೆಪುಣಿ ಗ್ರಾಮ ವ್ಯಾಪ್ತಿಯ ಶೇಣವ ಮೈದಾನ, ಕೊಣಾಜೆ ಮಂಗಳೂರು ವಿ.ವಿ. ಹೊರ ಆವರಣ, ಬಿಎಸ್‌ಎನ್‌ಎಲ್ ಬಳಿ, ರಸ್ತೆಬದಿ ಮಾತ್ರವಲ್ಲದೆ ಹುಡುಕುತ್ತಾ ಹೋದಂತೆ ಎಲ್ಲೆಂದರಲ್ಲಿ ಕಿಡಿಗೇಡಿಗಳ ಬೆಂಕಿಯ ಕೆನ್ನಾಲಗೆಗೆ ಅರೆಬರೆ ಸುಟ್ಟ ಪ್ಲಾಸ್ಟಿಕ್, ಇತರ ತ್ಯಾಜ್ಯದ ಕಟ್ಟುಗಳು, ಆಸುಪಾಸಿನಲ್ಲಿರುವ ಗಿಡ ಮರ ಸುಟ್ಟು ಹೋಗಿರುವುದು ಕಾಣಲು ಸಿಗುತ್ತಿವೆ.
ಕಿಡಿಗೇಡಿಗಳ ಬೆಂಕಿಗೆ 21 ಗಿಡಗಳ ನಾಶಕಿಡಿಗೇಡಿಗಳ ಬೆಂಕಿಗೆ ಬಾಳೆಪುಣಿ ಗ್ರಾಮ ವ್ಯಾಪ್ತಿಯ ಶೇಣವ ಮೈದಾನದಲ್ಲಿ ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯುಕ್ತ ಜನಶಿಕ್ಷಣ ಟ್ರಸ್ಟ್ ಮುತುವರ್ಜಿಯಿಂದ 75 ಹಣ್ಣಿನ ಹೈಬ್ರೀಡ್ ಸಸಿ ನೆಡಲಾಗಿತ್ತು. ಈ ಭಾಗದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಬೆಂಕಿ ಹಚ್ಚಲಾಗುತ್ತದೆ. ಈ ವರ್ಷವೂ ಬೆಂಕಿ ಪುನರಾವರ್ತನೆಯಾಗಿದ್ದು ಹೂಬಿಡುವ ಹಂತ ತಲುಪಿದ್ದ ಮಾವು, ಹಲಸು, ನೆಲ್ಲಿ, ಪೇರಳೆ, ನೇರಳೆ ಸಹಿತ ಒಟ್ಟು 21 ಗಿಡಗಳು ಸುಟ್ಟು ಹೋಗಿವೆ. ಇತರ ಕಡೆಗಳಲ್ಲೂ ಹಲವು ಮರ ಸುಟ್ಟು ಹೋಗಿದ್ದರೆ ಕೆಲವು ಅರೆಬರೆ ಬೆಂದು ರೋಧಿಸುತ್ತಿವೆ. ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಕಾಡ್ಗಿಚ್ಚು ಸಂದರ್ಭ ಕಾರ್ಯನಿರ್ವಹಿಸುವ ಅರಣ್ಯ ಇಲಾಖೆ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ.
ಕಾಡ್ಗಿಚ್ಚಿನ ಬಗ್ಗೆ ಜನರಲ್ಲಿ ಜಾಗೃತಿ ಇದ್ದು ಬೆಂಕಿ ನಂದಿಸಲು ಪ್ರಯತ್ನಿಸುತ್ತಾರೆ. ತ್ಯಾಜ್ಯ, ಹುಲ್ಲು ನಾಶಕ್ಕಾಗಿ ಬೆಂಕಿ ಕೊಡುತ್ತಾರೆ, ಇದರಿಂದ ಹಲವು ಗಿಡಗಳು ನಾಶವಾಗಿ ಪರಿಸರ ಮಾಲಿನ್ಯವಾಗಿ ಜೀವಹರಣ ಆಗುವ ಅಪಾಯ ಇದೆ. ಅರಣ್ಯ ಇಲಾಖೆ ಮಾದರಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಸ್ಥಳೀಯಾಡಳಿತ, ನಾಗರಿಕರು ಎಚ್ಚೆತ್ತುಕೊಳ್ಳಬೇಕು. ಶೀನ ಶೆಟ್ಟಿ, ಜಿಲ್ಲಾ ಸ್ವಚ್ಛತಾ ರಾಯಭಾರಿ ಕೆಲವು ಗ್ರಾ.ಪಂ.ಗಳಲ್ಲಿ ಕಸ ಸಂಗ್ರಹ ಆದರೂ ವಿಲೇವಾರಿ ಸಮಸ್ಯೆ ಇದೆ. ಕೆಲವು ಕಡೆ ಖಾಸಗಿ ಸಂಸ್ಥೆ ಕಸ ಸಂಗ್ರಹ ಮಾಡುತ್ತಿದ್ದು ಶುಲ್ಕ ನೀಡದವರ ಕಸ ಸ್ವೀಕರಿಸದ ಕಾರಣ ರಸ್ತೆಬದಿ ಎಸೆಯುತ್ತಾರೆ. ಕಸಕ್ಕೆ ಬೆಂಕಿ ಹಚ್ಚುವವರನ್ನು ಪತ್ತೆ ಹಚ್ಚುವುದು ಕಷ್ಟ. ಈ ಬಗ್ಗೆ ಪಿಡಿಒಗಳ ಸಭೆ ನಡೆಸಲಾಗಿದ್ದು, 15 ದಿನಗಳಲ್ಲಿ ರಸ್ತೆಬದಿ ಕಸ ಎಸೆಯುವುದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗಿದೆ. ಗುರುದತ್ ಎಂ.ಎನ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಳ್ಳಾಲ ತಾ.ಪಂ. https://www.vijayavani.net/rajagopuram-inauguration https://www.vijayavani.net/rural-bank-election