ಬಳ್ಳಾರಿ ನಗರದ ವಟ್ಟಪ್ಪಗೇರಿಯಲ್ಲಿ ಬಾಲಕನ ಮೇಲೆ ಹುಚ್ಚುನಾಯಿ ದಾಳಿ ಮಾಡಿರುವುದು. 
ಜಿಲ್ಲೆ

ಬಳ್ಳಾರಿ: 21 ಜನರಿಗೆ ಕಚ್ಚಿದ ಹುಚ್ಚುನಾಯಿ

Bellari - Heera Nayak

ಬಳ್ಳಾರಿ : ನಗರದ ವಟ್ಟಪ್ಪಗೇರಿಯಲ್ಲಿ ಸೋಮವಾರ ರಾತ್ರಿ 21 ಜನರಿಗೆ ಹುಚ್ಚು ನಾಯಿ ಕಚ್ಚಿದೆ. ಮನೆ ಮುಂದೆ ಮಲಗಿದ್ದವರನ್ನು ಹಾಗೂ ಓಣಿಯಲ್ಲಿ ಓಡಾಡಿದವರ ಮೇಲೆ ದಾಳಿ ನಡೆಸಿದೆ. ಅದರಲ್ಲಿ ಏಳು ಜನ ಮಹಿಳೆ, ಆರು ಮಕ್ಕಳು ಸೇರಿದಂತೆ ಒಟ್ಟು 21 ಜನರ ಕೈ, ಕಾಲಿಗೆ ಕಚ್ಚಿದ್ದು, ಗಾಯಗೊಂಡರಲ್ಲಿ 18 ಜನರನ್ನು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪಾಲಿಕೆ ಆಯುಕ್ತ ರುದ್ರೇಶ್, ವಿಮ್ಸ್ ನಿರ್ದೇಶಕ ಡಾ.ಗಂಗಾಧರ್‌ಗೌಡ, ಡಿಎಚ್‌ಒ ಡಾ.ಜನಾರ್ದನ ವಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪಾಲಿಕೆ ಅಧಿಕಾರಿಗಳು ನಿಯಂತ್ರಿಸುವಲ್ಲಿ ನಿರ್ಲಕ್ಷೃ ವಹಿಸಿದ್ದಾರೆ. ನಗರದಲ್ಲೇ ಅಂದಾಜು 20 ಸಾವಿರ ಬೀದಿ ನಾಯಿಗಳಿವೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ನಾಯಿಗಳ ನಿಯಂತ್ರಣ ಮಾಡುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶ್ವಾನಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲು ಸರ್ಕಾರ ಕೋಟಿ ಕೋಟಿ ಹಣ ವ್ಯಯಿಸುತ್ತಿದೆ. ಆದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಅಲ್ಲದೆ ನಗರದಲ್ಲಿರುವ ನಾಯಿಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕೆನ್ನುವುದು ಜನರ ಒತ್ತಾಯವಾಗಿದೆ.