ಜಿಲ್ಲೆ

29 ದಿನದಲ್ಲಿ 21.85 ಲಕ್ಷ ರೂ. ಕಾಣಿಕೆ ಸಂಗ್ರಹ

ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ 29 ದಿನಗಳಲ್ಲಿ 21,85,056 ರೂ. ಕಾಣಿಕೆ ಸಂಗ್ರಹವಾಗಿದೆ.
ಎಸ್‌ಬಿಐ ಸಿಬ್ಬಂದಿ, ಭಕ್ತರ ಸಮ್ಮುಖದಲ್ಲಿ ಕಾಣಿಕೆ ಪೆಟ್ಟಿಗೆ ಇತ್ತೀಚೆಗೆ ತೆರೆದು ಎಣಿಕೆ ಮಾಡಲಾಗಿದೆ. 10,897ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಾಮಗ್ರಿಗಳು ಕೂಡ ಇವೆ. ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ್, ಟ್ರಸ್ಟಿಗಳು ಇದ್ದರು.