ಜಿಲ್ಲೆ

20ಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ಸೇರ್ಪಡೆ

Chamarajanagar

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಣಗಳ್ಳಿ ಗ್ರಾಮದ 20ಕ್ಕೂ ಹೆಚ್ಚು ಮುಖಂಡರು ಭಾನುವಾರ ಸಂಜೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು.


ಪಕ್ಷ ಸೇರ್ಪಡೆಯಾದ ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್ ಮಂಜುನಾಥ್, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಉತ್ತಮ ಆಡಳಿತ ನೀಡಿ, ಜನಮನ್ನಣೆ ಗಳಿಸಿದ್ದಾರೆ. ಈ ದಿಸೆಯಲ್ಲಿ ಹನೂರು ಭಾಗದಲ್ಲೂ ಜೆಡಿಎಸ್ ಸಿದ್ಧಾಂತವನ್ನು ಮೆಚ್ಚಿ ಹೆಚ್ಚಿನ ಯುವಕರು, ಮಹಿಳೆಯರು ಸೇರಿದಂತೆ ಹಿರಿಯ ನಾಯಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ ಎಂದರು.


ಮುಖಂಡರಾದ ಜಯಮಾಲಾ, ಲೋಕೇಶ್, ಶಿವಮಲ್ಲೇಗೌಡ, ಮಲ್ಲೇಶ್, ಮನು, ಪುಟ್ಟರಾಜು, ಈರೇಗೌಡ, ರಾಜು, ರಾಜೇಶ್, ಮಹೇಶ್, ಚೇತನ್, ಶಂಕರ್, ನಿಂಗರಾಜು, ಚನ್ನಯ್ಯ, ಮಹದೇವಯ್ಯ, ಶಿವಲಿಂಗಯ್ಯ, ಸೋಮಣ್ಣ, ಪ್ರೀತಮ್, ಸಿದ್ದಪ್ಪ, ಕುಮಾರ್ ಹಾಗೂ ಕಾಳೇಗೌಡ ಸೇರಿದಂತೆ ಇನ್ನಿತರರು ಜೆಡಿಎಸ್‌ಗೆ ಸೇರ್ಪಡೆಯಾದರು. ಚಾಮುಲ್ ಮಾಜಿ ಅಧ್ಯಕ್ಷ ಸಿ.ಗುರುಮಲ್ಲಪ್ಪ, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಜಿಪಂ ಮಾಜಿ ಸದಸ್ಯ ನಾಗೇಂದ್ರಬಾಬು ಇತರರು ಇದ್ದರು.