ಜಿಲ್ಲೆ

2,084 ಪ್ರಕರಣ ಇತ್ಯರ್ಥ

ಕೋಲಾರ ಡೆಸ್ಕ್

ಬಂಗಾರಪೇಟೆ: ಸ್ಥಳಿಯ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ಒಟ್ಟು 2,084 ಪ್ರಕರಣ ಇತ್ಯರ್ಥ ಪಡಿಸಲಾಗಿದೆ.

ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ಪ್ರಧಾನ ಸಿವಿಲ್​ ನ್ಯಾಯಾಧೀಶೆ ಸುಕೀತಾ .ಎಸ್​.ಹದ್ದಿ ಅವರು 9 ಸಿವಿಲ್​ ಪ್ರಕರಣಗಳು ಮತ್ತು ಕ್ರಿಮಿನಲ್​ ಪ್ರಕರಣಗಳು 1,293 ಸೇರಿ ಒಟ್ಟು 1,302 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ಮೊತ್ತ 1,11,09,869 ರೂ.ಗಳನ್ನು ವಾದಿಗಳಿಗೆ ಕೊಡಿಸಿ ಇತ್ಯರ್ಥಪಡಿಸಿರುತ್ತಾರೆ.

ಸದರಿ ನ್ಯಾಯಾಲಯದಲ್ಲಿ ಬ್ಯಾಂಕ್​ನ 14,817 ಪಿಎಲ್​ಸಿ ಕೇಸ್​ ಇತ್ಯರ್ಥಪಡಿಸಿ ಇದರಿಂದ ಬಂದ 5,06,40,495 ರೂ. ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡಲಾಯಿತು.

ಒಂದನೇ ಅಪರ ಸಿವಿಲ್​ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್​ ಅಲಬೂರ್​ ವ್ಯಾಪ್ತಿಗೆ ಬರುವ ಅಪರ ನ್ಯಾಯಾಲಯದಲ್ಲಿ 14 ಚೆಕ್​ ಬೌನ್ಸ್​ ಕೇಸುಗಳು ಇತ್ಯಾರ್ಥ ಪಡಿಸಿ ಇದರಿಂದ 38,55,000 ರೂ.ವಾದಿಗಳು ಪಡೆದಿರುತ್ತಾರೆ. 3 ಬ್ಯಾಂಕ್​ ಕೇಸುಗಳನ್ನು ಇತ್ಯರ್ಥ ಪಡಿಸಿ ಇದರಿಂದ 6,85,000 ರೂ., 13 ಸಿವಿಲ್​ ಪ್ರಕರಣದಡಿ 10,99,466 ರೂ.ವಾದಿಗಳು ಅನುಕೂಲ ಪಡೆದಿದ್ದಾರೆ. 113 ಮಂದಿ ಪ್ರಮಾಣ ಕೇಸುಗಳನ್ನು ಇತ್ಯರ್ಥ ಪಡಿಸಿದ್ದಾರೆ. 614 ಕ್ರಿಮಿನಲ್​ ಇತ್ಯರ್ಥ ಪಡಿಸಿ 6,45,200 ರೂ. ಸರ್ಕಾರಕ್ಕೆ ತುಂಬಿರುತ್ತಾರೆ.

ಎರಡನೇ ಅಪರ ಸಿವಿಲ್​ ನ್ಯಾಯಾಧೀಶರ ನ್ಯಾಯಾಲಯದಲ್ಲಿ 15 ಚೆಕ್​ ಬೌನ್ಸ್​ ಕೇಸುಗಳು ಇತ್ಯರ್ಥ ಪಡಿಸಿ ಇದರಿಂದ 40,61,297 ವಾದಿಗಳು ಪಡೆದಿರುತ್ತಾರೆ. 9 ಸಿವಿಲ್​ ಪ್ರಕರಣಗಳು ಇತ್ಯರ್ಥ ಪಡಿಸಿ ಇದರಿಂದ 13,36,748 ರೂ.ವಾದಿಗಳು ಪಡೆದಿರುತ್ತಾರೆ. 1 ಕ್ರಿಮಿನಲ್​ ಇತ್ಯರ್ಥಪಡಿಸಿ 1 ಲಕ್ಷ ರೂ. ವಾದಿಗಳು ಪಡೆದಿದ್ದಾರೆ.