ಜಿಲ್ಲೆ

203 ಗ್ರಾಂ ಚಿನ್ನಾಭರಣ ಕಳವು

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆ ಶ್ರೇಯಾ ನಗರದಲ್ಲಿ ಹಾಡಹಗಲೇ ಕಳ್ಳರು ಮನೆ ಮುಂಬಾಗಿಲ ಇಂಟರ್‌ಲಾಕ್ ಮುರಿದು ಅಂದಾಜು 10.15 ಲಕ್ಷ ರೂ. ಮೌಲ್ಯದ 203 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ.

ಡಾ. ಪುರಷೋತ್ತಮ ರೆಡ್ಡಿ ಎಂಬುವರ ಮನೆಯಲ್ಲಿ ಕಳವಾಗಿದೆ. ಕಳ್ಳರು ಡಿ. 20ರಂದು ಬೆಳಗ್ಗೆ 9ರಿಂದ ಸಂಜೆ 4.30ರೊಳಗೆ ಮನೆಯ ಇಂಟರ್‌ಲಾಕ್ ಮುರಿದು, ನಂತರ ಬೆಡ್‌ರೂಮ್‌ನಲ್ಲಿದ್ದ ಕಬ್ಬಿಣದ ಅಲ್ಮೇರಾ ಬಾಗಿಲು ಮತ್ತು ಸೇಫ್ ಲಾಕರ್ ಮುರಿದು ಚಿನ್ನಾಭರಣ ಕಳವು ಮಾಡಿದ್ದಾರೆ. ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.