ಜಿಲ್ಲೆ

2025ಕ್ಕೆ ಕ್ಷಯ ಮುಕ್ತ ಭಾರತದ ಗುರಿ

ಚಿತ್ರದುರ್ಗ: ದೇಶವನ್ನು ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿ ಮಾಡಲಾಗಿದೆ. ಇದೇ ಮಾದರಿ ದೇಶ,ರಾಜ್ಯಹಾಗೂ ಜಿಲ್ಲೆಯನ್ನು ಕ್ಷಯಮುಕ್ತವನ್ನಾಗಿ ಮಾಡಲು ಎಲ್ಲ ಇಲಾಖೆಗಳ ಅಧಿಕಾರಿಗಳು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸ ಬೇಕೆಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಮಟ್ಟದ ಕ್ಷಯರೋಗ ವೇದಿಕೆ ಸಭೆಯಲ್ಲಿ ಮಾತನಾಡಿದ ಅವರು,2025ಕ್ಕೆ ದೇಶವನ್ನು ಕ್ಷಯ ರೋಗ ಮುಕ್ತವಾಗಿಸಲು ರಾಷ್ಟ್ರೀಯ ಸ್ವಾಸ್ಥ್ಯ ುಷನ್ ಗುರಿ ಹೊಂದಿದೆ. ಈ ರೋಗವನ್ನು ಸಂಪೂರ್ಣವಾಗಿ ಗುಣ ಪಡಿಸಬಹುದು.
ಕುಷ್ಠ, ಕ್ಷಯರೋಗಳೆಡೆ ಇರುವ ಕಳಂಕ ಮನೋಭಾವ ಸರಿಯಲ್ಲ. ರೋಗಗಳ ಪತ್ತೆಗೆ ಹಿಂದೇಟು ಹೊಡೆಯಬಾರದು. ಕ್ಷಯ ಪತ್ತೆ ಕಾರ್ಯ ಹೆಚ್ಚಿಸುವುದರೊಂದಿಗೆ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು. ವಿಶ್ವಸಂಸ್ಥೆ ವರದಿ ಪ್ರಕಾರ ಶೇ.27 ಕ್ಷಯ ರೋಗದ ವರದಿಗಳು ಭಾ ರತದಲ್ಲಿ ದಾಖಲಾಗುತ್ತಿವೆ.
ಕರ್ನಾಟಕದಲ್ಲಿ ಈ ಪ್ರಮಾಣ ಶೇ.8 ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ರೋಗದೆಡೆ ವಿದ್ಯಾರ್ಥಿ ಗಳಲ್ಲೂ ಜಾಗೃತಿ ಮೂಡಿಸ ಬೇಕೆಂದ ಜಿಲ್ಲಾಧಿಕಾರಿ, ಸಮಗ್ರ ಚಿಕಿತ್ಸಾ ಯೋಜನೆ ರೂಪಿಸಿದರೆ ಈ ಯೋಜನೆಗೆ ಕೆಎಂಇಆರ್‌ಸಿ ಅಡಿ ಅನುದಾನ ಒದಗಿಸಲು ಪ್ರಸ್ತಾವ ನೆ ಸಲ್ಲಿಸಲಾಗುವುದು ಎಂದರು.
ವಿಶ್ವ ರೋಗ ಸಂಸ್ಥೆ ಸಮಾಲೋಚಕಿ ಡಾ.ಹಂಸವೇಣಿ ಪ್ರಾತ್ಯಕ್ಷಕೆ ನೀಡಿದರು. ಜಿಲ್ಲೆಯಲ್ಲಿ 1097 ಕ್ಷಯರೋಗ ಪ್ರಕರಣಗಳು ಪತ್ತೆಯಾ ಗಿವೆ. ಈ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ 12312 ಕ್ಷಯರೋಗ ಪತ್ತೆ ಪರೀಕ್ಷೆ ನಡೆಸಲು ಗುರಿ ನೀಡಲಾಗಿತ್ತು. ಈವರೆಗೂ 9547 ಪರೀಕ್ಷೆ ಗಳನ್ನು ನಡೆಸಲಾಗಿದೆ. ಉಚಿತ ಚಿಕಿತ್ಸೆಯೊಂದಿಗೆ ಚಿಕಿತ್ಸೆ ಪೂರ್ಣಗೊಳ್ಳುವರೆಗೆ ಪ್ರತಿ ರೋಗಿಗೆ ಸೂಕ್ತ ಧನ ಸಹಾಯ ಹಾಗೂ ಆಹಾರಕಿಟ್ ವಿತರಿಸಲಾಗುತ್ತದೆ ಎಂದರು.
ಡಿಎಚ್‌ಒ ಡಾ.ರಂಗನಾಥ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಕುಮಾರಸ್ವಾಮಿ,ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಸಿ.ಒ.ಸುಧಾ,ಕಾರ್ಮಿಕ ಅಧಿಕಾರಿ ಸಿ.ಎನ್.ಯಶೋಧರ,ಡಿಡಿಪಿಐ ರವಿಶಂಕರ ರೆಡ್ಡಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉ ಪ ನಿರ್ದೆಶಕಿ ಭಾರತಿ ಆರ್.ಬಣಕಾರ್,ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಉಮಾಪತಿ ಮತ್ತಿತರರು ಇದ್ದರು.
(ಸಿಟಿಡಿ 5 ಕ್ಷಯ)
ಚಿತ್ರದುರ್ಗದಲ್ಲಿ ಸೋಮವಾರ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಕ್ಷಯರೋಗ ವೇದಿಕೆ ಸಭೆ ನಡೆ ಯಿತು.ಡಿಎಚ್‌ಒ ಡಾ.ರಂಗನಾಥ,ಡಾ.ಹಂಸವೇಣಿ,ಡಾ.ಕುಮಾರಸ್ವಾಮಿ,ಡಾ.ಸಿ.ಒ.ಸುಧಾ,ಸಿ.ಎನ್.ಯಶೋಧರ,ರವಿಶಂಕರರೆಡ್ಡಿ,ಭಾ ರತಿ ಆರ್.ಬಣಕಾರ್,ಉಮಾಪತಿ ಇತರರು ಇದ್ದರು.