ಪಂ.ಕೆ.ಎಸ್.ಹಡಪದ ಅವರ 18ನೇ ಪುಣ್ಯ ಸ್ಮರಣಾರ್ಥ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವತಿಯಿಂದ ಜೂನ್ 2 ರಂದು ಸಂಜೆ 5.30ಕ್ಕೆ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ 2024ನೇ ಸಾಲಿನ ಪಂ.ಕೆ.ಎಸ್.ಹಡಪದ ಪ್ರಶಸ್ತಿ ಪುರಸ್ಕಾರ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಜೆ 5.30ಕ್ಕೆ ಎಸ್.ಜಿ.ಪಿ. ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಸಮೂಹ ತಬಲಾ ವಾದನ’ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಪಂ.ಜಿ.ಎಸ್.ವೇಣುಗೋಪಾಲ ರಾಜು ಅವರಿಂದ ‘ತಬಲಾ ಸೋಲೋ’ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ಪಂ.ರಂಜನ್ ಕುಮಾರ್ ಬೇವ್ರ(ಲೆಹರಾ) ಸಹಕಾರ ನೀಡಲಿದ್ದಾರೆ.