ಜಿಲ್ಲೆ

ಸರ್ಕಾರ ಸವಲತ್ತು ನೀಡಿ ಉತ್ತೇಜಿಸಿ

ಶಿವರಾಜ.ಎಂ

ಕೆಪಿಸಿಸಿ ಸದಸ್ಯ ವಿ.ಶಾಂತಕುಮಾರ್ ಹೇಳಿಕೆ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಸರ್ಕಾರ ಹಾಗೂ ಸಂಘದಿಂದ ದೊರೆಯುವ ಸವಲತ್ತುಗಳನ್ನು ಷೇರುದಾರ ಸದಸ್ಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ವಿ.ಶಾಂತಕುಮಾರ್ ತಿಳಿಸಿದರು.
ಪಟ್ಟಣದ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ದೇವನಹಳ್ಳಿ ತಾಲೂಕು ಗ್ರಾಮೋದ್ಯೋಗ ಕಸುಬುದಾರ ಕೈಗಾರಿಕೆ ವಿವಿಧೋದ್ದೇಶ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಸಂಘದ ನೂತನ ಕಟ್ಟಡ ನಿರ್ಮಿಸಿ, ಸಂಘದಿಂದ ಲಾಭಾಂಶ ಬರುವ ಕೆಲಸ ಮಾಡಿದ್ದಾರೆ. ಇದರ ಜತೆಗೆ ಸ್ತ್ರೀ ಶಕ್ತಿ ಸಂಘಗಳಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಕೊಡುವ ಮೂಲಕ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದು, ಸದಸ್ಯರು ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು, ಆರ್ಥಿಕವಾಗಿ ಮುಂದೆ ಬರಬೇಕು. ಕಸುಬುದಾರರು ಸಂಘದ ಬೆಳವಣಿಗೆಗೂ ಸಹಕರಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ, ಸಂಘದ ಆವರಣದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು, ಅದನ್ನು ಬಾಡಿಗೆಗೆ ನೀಡಲಾಗಿದೆ. ಉಳಿದ ಮಳಿಗೆಗಳಲ್ಲಿ ಮುಂದಿನ ದಿನಗಳಲ್ಲಿ ಖಾದಿ ಬಟ್ಟೆ ಹಾಗೂ ವಸ್ತುಗಳ ಮಾರಾಟ ಮಳಿಗೆ ಪ್ರಾರಂಭಿಸಿದರೆ ಒಳಿತು. ನೂತನ ಕಟ್ಟಡದಲ್ಲಿ ವಿಶಾಲವಾದ ಜಾಗವಿದ್ದು, ತಾಲೂಕಿನ ಸ್ತ್ರೀಶಕ್ತಿ ಸಂಘಗಳಿಗೆ ವಿವಿಧ ಕೌಶಲ ತರಬೇತಿಗಳನ್ನು ನೀಡಿ, ಸ್ವ-ಉದ್ಯೋಗ ಮಾಡಲು ಉತ್ತೇಜನ ನೀಡುವ ಕೆಲಸ ಆರಂಬಿಸಿ ಎಂದರು.
ಸಂಘದ ಉಪಾಧ್ಯಕ್ಷೆ ನಾಗಮಣಿ ಬೈರೇಗೌಡ, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮಾಜಿ ಅಧ್ಯಕ್ಷ ಭುವನಹಳ್ಳಿ ಮುನಿರಾಜು, ಜಿಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣಪ್ಪ, ತಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ, ಸಂಘದ ಮಾಜಿ ಅಧ್ಯಕ್ಷರಾದ ಕೆ.ಪಟಾಲಪ್ಪ, ಆರ್.ಲಕ್ಷ್ಮಣಮೂರ್ತಿ , ಎಸ್.ನಾಗೇಗೌಡ, ಎಂ.ಶ್ರೀನಿವಾಸ್, ಮಾಜಿ ಜಿಪಂ ಅಧ್ಯಕ್ಷ ಬಿ.ರಾಜಣ್ಣ, ನಿರ್ದೇಶಕರಾದ ಆರ್.ಜಯರಾಂ, ಬಿ.ಎಂ.ನಾರಾಯಣಸ್ವಾಮಿ, ಸೈುಲಾ, ಮಂಜುಳಾ ಮೋಹನ ಸುನಂದಮ್ಮ, ಮಾಜಿ ಗ್ರಾಪಂ ಅಧ್ಯಕ್ಷ ಎ.ಚಂದ್ರಶೇಖರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎನ್.ಶ್ರೀನಿವಾಸಮೂರ್ತಿ, ಗುಮಾಸ್ತ ಎಚ್.ಆರ್.ವಾಸುದೇವ್ ಇದ್ದರು